Breaking News

ಭಾರತ ತಂಡದ ನೂತನ್ ಕೋಚ್ ಆಗಿ ರವಿ ಶಾಸ್ತ್ರಿ ಆಯ್ಕೆ



ನವದೆಹಲಿ : ನಿರೀಕ್ಷೆಯಂತೆಯೇ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಒಳಗೊಂಡ ಸಲಹಾ ಸಮಿತಿ ಮಾಡಿರುವ ಶಿಫಾರಸ್ಸಿನಂತೆ ಬಿಸಿಸಿಐ ರವಿಶಾಸ್ತ್ರಿಯವರ ನೇಮಕ ಪ್ರಕಟಿಸಿದೆ.

ಈ ಹಿಂದೆ ಕೋಚ್ ಆಗಿದ್ದ ಅನಿಲ್ ಕುಂಬ್ಳೆಯವರ ಅವಧಿ ಮುಗಿದ ಕಾರಣ ನೂತನ ಕೋಚ್ ಆಯ್ಕೆಗಾಗಿ ಸಂದರ್ಶನ ನಡೆಸಲಾಗಿತ್ತು. ರವಿಶಾಸ್ತ್ರಿಯವರ ಆಯ್ಕೆಗೆ ನಾಯಕ ವಿರಾಟ್ ಕೊಹ್ಲಿ ಒಲವು ತೋರಿದ್ದ ಕಾರಣ ಸಹಜವಾಗಿಯೇ ಶಾಸ್ತ್ರಿ ಹೆಸರನ್ನು ಅನುಮೋದಿಸಲಾಗಿದೆ.

ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಆರು ಮಂದಿ ಅರ್ಜಿ ಸಲ್ಲಿಸಿದ್ದು, ಸಲಹಾ ಸಮಿತಿ ಸದಸ್ಯರು ಸಂದರ್ಶನ ಸಹ ನಡೆಸಿದ್ದರು. ವೀರೇಂದ್ರ ಸೆಹ್ವಾಗ್ ನೇಮಕಕ್ಕೆ ಸಲಹಾ ಸಮಿತಿ ಸದಸ್ಯರು ಒಲವು ತೋರಿದ್ದರಾದರೂ ಅಂತಿಮವಾಗಿ ನಾಯಕ ವಿರಾಟ್ ಕೊಹ್ಲಿಯವರ ಆಪೇಕ್ಷೆಯಂತೆ ರವಿಶಾಸ್ತ್ರಿಯವರ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ರವಿಶಾಸ್ತ್ರಿ ಮುಂದಿನ ವಿಶ್ವಕಪ್ ವರೆಗೆ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

No comments