Breaking News

ರಮ್ಯಾ ವಿರುದ್ಧ ಕಿಡಿ ಕಾರಿದ ಶಿಲ್ಪಾ ಗಣೇಶ್


ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚೀನಾ ರಾಯಭಾರಿ ಭೇಟಿ ಮಾಡಿದ್ದನ್ನು ಸಮರ್ಥಿಸಿ ಹಾಗೂ ಪ್ರಧಾನಿ ಮೋದಿ ಅವರನ್ನು ದುರ್ಬಲ ಪ್ರಧಾನಿ ಎಂದು ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡುವ ಮೂಲಕ ಜರಿದಿದ್ದಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಶಿಲ್ಪಾ, ರಾಹುಲ್ ಗಾಂಧಿ ಕೇವಲ ಸಂಸದರು ಮಾತ್ರ. ದೇಶದ ಯಾವುದೇ ಸಂಸ್ಥೆಗಳ ಮುಖ್ಯಸ್ಥರಲ್ಲ. ಇಂತಹ ಸಂದರ್ಭದಲ್ಲಿ ಚೀನಾ ರಾಯಭಾರಿ ಭೇಟಿಯ ಹಿಂದಿನ ಉದ್ದೇಶವೇನು? ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚೀನಾ ಹಣಿಯಲು ಪ್ರಯತ್ನಿಸುತ್ತಿರುವಾಗ ರಾಹುಲ್ ಚೀನಾ ರಾಯಭಾಯ ಭೇಟಿಯ ಹಿಂದಿನ ಕುತಂತ್ರವೇನು ಎಂದು ಪ್ರಶ್ನಿಸಿದ್ದಾರೆ. ಯಾವ ಮಾನದಂಡದ ಮೇಲೆ ರಾಹುಲ್ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೆ? ಈ ಭೇಟಿಯಿಂದ ಏನುಸಾಧಿಸಲು ಹೊರಟಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ಶಿಲ್ಪಾ ಗಣೇಶ್ ಅಟುವಾಗಿ ಟೀಕಿಸಿದ್ದಾರೆ.

No comments