Breaking News

ಉಗ್ರರ ಗುಂಡಿನ ದಾಳಿ ನಡೆಯುತ್ತಿದ್ದರೂ 50ಕ್ಕೂ ಹೆಚ್ಚು ಅಮರನಾಥ ಯಾತ್ರಿಕರ ಜೀವ ಉಳಿಸಿದ ಚಾಲಕ ಶೇಕ್‌ ಸಲೀಂ


ಕಾಶ್ಮೀರ : ರಾತ್ರಿ ಕತ್ತಲು, ತಮ್ಮ ಬಸ್‌ನಲ್ಲಿದ್ದ ಪ್ರಯಾಣಿಕರು ನಿದ್ರೆಗೆ ಜಾರಿದ್ದಾರೆ. ಇದ್ದಕ್ಕಿದ್ದಂತೆ ಗುಂಡಿನ ದಾಳಿಯ ಸದ್ದು, ಎಚ್ಚರಗೊಂಡ ಪ್ರಯಾಣಿಕರ ಚೀರಾಟ... ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದ ಬಸ್‌ನ ಚಾಲಕ ತನ್ನ ಜೀವದ ಹಂಗು ತೊರೆದು ಬಸ್‌ಅನ್ನು ಮತ್ತಷ್ಟು ವೇಗವಾಗಿ ಓಡಿಸಿ 50ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾರೆ.

ಭಯೋತ್ಪಾದಕರು ದಾಳಿ ನಡೆಸಿದ ಅಮರನಾಥ ಯಾತ್ರಿಕರಿದ್ದ ಬಸ್‌ನ ಚಾಲಕ, ಗುಜರಾತ್‌ನ ಶೇಕ್‌ ಸಲೀಂ ಗಫೂರ್ ಈ ಸಾಹಸ ಮೆರೆದ ವ್ಯಕ್ತಿ. ತನ್ನ ಜೀವವನ್ನೂ ಲೆಕ್ಕಿಸದೆ, ಬಸ್‌ನ ಮುಂದಿನ ಗಾಜು ಪುಡಿಯಾಗಿದ್ದರೂ ಅದರಲ್ಲಿಯೇ ಬಸ್‌ ಅನ್ನು ಎರಡು ಕಿ.ಮೀ. ವರೆಗೆ ವೇಗವಾಗಿ ಚಾಲನೆ ಮಾಡಿದ್ದಾರೆ. ಹಲವು ಮಂದಿಯ ಜೀವ ಉಳಿಸಿ ಮೆಚ್ಚುಗೆಯನ್ನೂ ಪಡೆದಿದ್ದಾರೆ.

ಶೇಕ್‌ ಸಲೀಂ ಗಫೂರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅವರಿಗೆ 3 ಲಕ್ಷ ನಗದು ಬಹುಮಾನ ಘೋಷಿಸಿದೆ ಹಾಗೂ ಶ್ರೀ ಅಮರಾನಾಥ್‌ಜಿ ಶ್ರೈನ್‌ ಬೋರ್ಡ್‌(ಎಸ್‌ಎಎಸ್‌ಬಿ) 2 ಲಕ್ಷ ಬಹುಮಾನ ಪ್ರಕಟಿಸಿದೆ.

No comments