Breaking News

ರಾಜಕೀಯಕ್ಕಾಗಿ ಶರತ್ ಹೆತ್ತವರ ಕೊನೆಯಾಸೆಯನ್ನು ಬೂದಿ ಮಾಡಿತೆ ಕಾಂಗ್ರೆಸ್?



ಮಂಗಳೂರು :​ಕರಾವಳಿ ಜನರೇ ಬೆಚ್ಚಿಬೀಳುವಂತಹ ಸುದ್ದಿಯೊಂದು ಸಾಕ್ಷಿ ಸಮೇತ ಹೊರಬಿದ್ದಿದೆ. ರಾಜಕೀಯಕ್ಕಾಗಿ ಹೆತ್ತವರಿಗೆ ಮಗನ ಸಾವನ್ನು ತಿಳಿಸದೆ ದ್ರೋಹ ಮಾಡಿದ ನಮ್ಮ ಆಡಳಿತ ವ್ಯವಸ್ಥೆಯ ಕ್ರೂರ ಮುಖ ಹೊರಬಿದ್ದಿದೆ.

ಹೌದು,ಜುಲೈ 4ರಂದು ದುಷ್ಕರ್ಮಿಗಳಿಂದ ದಾಳಿಗೆ ಒಳಗಾಗಿ ಎಜೆ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದ ಶರತ್ ಮಡಿವಾಳ್ ಅವರು ಜುಲೈ ಏಳರ ಮಧ್ಯರಾತ್ರಿ 12:30ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದರು. ಆದರೆ ಶರತ್ ಮಡಿವಾಳ ಮೃತಪಟ್ಟು 20ಗಂಟೆಯ ನಂತರ ಅಂದರೆ ಜುಲೈ ಏಳರ ಸಂಜೆ 8:30ಕ್ಕೆ ಮನೆಯವರಿಗೆ ಶರತ್ ಮಡಿವಾಳ್ ಅವರ ಮರಣದ ಸುದ್ದಿಯನ್ನು ವೈದ್ಯರು ತಿಳಿಸಿದ್ದು ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಅಡಚಣೆಯಾಗಬಾರದೆಂಬ ಉದ್ದೇಶಕ್ಕೆ ಹೆತ್ತ ತಂದೆತಾಯಿಗೇ ಮಗನ ಸಾವಿನ ಸುದ್ದಿ ತಿಳಿಸದೆ ರಾಜಕೀಯ ಒತ್ತಡಕ್ಕೆ ಮಣಿದ ಆಸ್ಪತ್ರೆ ವೈದ್ಯರು ಮೃತ ಸುದ್ದಿಯನ್ನು ತಿಳಿಸದೆ ಮುಚ್ಚಿಟ್ಟಿದ್ದರು. ಕಾಂಗ್ರೆಸ್ ಕಾರ್ಯಕ್ರಮ ಮುಗಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಾಸ್ ತೆರಳಿದ ಬಳಿಕ ಸಂಜೆ 8:30ರ ಸುಮಾರಿಗೆ ಶರತ್ ತಂದೆತಾಯಿಗೆ ವಿಷಯ ತಿಳಿಸಿದ್ದರು.

*ಆ 20 ಗಂಟೆಯಲ್ಲಿ ಆ ತಂದೆತಾಯಿ ಮಗ ಮೃತಪಟ್ಟಿರುವುದು ತಿಳಿಯದೆ ಅದೆಷ್ಟು ಬಾರಿ ದೇವರಲ್ಲಿ ಮಗನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದರೋ ಏನೋ*. ಅಲ್ಲದೆ ಮೃತ ವಿಷಯ ತಿಳಿದ ಶರತ್ ಹೆತ್ತವರು ಆ ದುಃಖದ ನಡುವಿಲ್ಲೂ ಮಗನ ನೇತ್ರಧಾನ ಹಾಗೂ ಅಂಗಾಂಗ ಧಾನ ಮಾಡುವಂತೆ ವೈದ್ಯರಲ್ಲಿ ಕೇಳಿಕೊಂಡಿದ್ದಾರೆ. ಆಗ ವೈದ್ಯರು ಮೃತಪಟ್ಟು 20ಗಂಟೆಗಳು ಕಳೆದಿದ್ದು ನೇತ್ರಧಾನ ಮಾಡಲು ಸಾಧ್ಯವಿಲ್ಲ ಎಂದಾಗ ಶರತ್ ತಂದೆತಾಯಿಗೆ ಧರೆಯೇ ಕುಸಿದಂತಹ ಭಾಸವಾಗಿದೆ.

 ಹೊಲಸು ರಾಜಕೀಯಕ್ಕೆ ಪ್ರಪಂಚ ನೋಡದ ಯಾರಿಗೋ ದೃಷ್ಟಿಯಾಗಬೇಕಿದ್ದ ಶರತ್ ಕಣ್ಣುಗಳು ಬೂದಿಯಾಗಿ ಹೋಗಿದೆ, ಹೆತ್ತವರು ತಮ್ಮ ಕೊನೆಯಾಸೆ ಈಡೇರಿಸದಂತಾಗಿದೆ. ಇದೆಂತಹಾ ರಾಜಕೀಯ, ಹೆತ್ತವರ ನೋವಿಗಿಂತ ಇವರಿಗೆ ತಮ್ಮ ರಾಜಕೀಯ ಕಾರ್ಯಕ್ರಮವೇ ಮುಖ್ಯವಾಯಿತೆ ಎಂಬ ಪ್ರಶ್ನೆ ಕಾಡುತ್ತಿದೆ. 

No comments