Breaking News

ಉಗ್ರರ ಸದೆಬಡಿಯಲು ಗೋರಕ್ಷಕರ ಕಳಿಸಲು ಉದ್ಧವ್ ಠಾಕ್ರೆ ಆಗ್ರಹ



ಮುಂಬೈ :  ಅಮರನಾಥ ಯಾತ್ರಿಗಳ ಮೇಲಿನ ದಾಳಿಗೆ ಬಿಜೆಪಿ ಮೇಲೆ ವಾಗ್ದಾಳಿ ಮುಂದುವರೆಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಗೋ ರಕ್ಷಕರನ್ನು ಉಗ್ರರ ಸದೆಬಡಿಯಲು ಕಾಶ್ಮೀರ ಕಣಿವೆಗೆ ಕಳುಹಿಸುವಂತೆ ಸಲಹೆ ಮಾಡಿದ್ದಾರೆ. ಅಮರನಾಥ ಯಾತ್ರೆಯಲ್ಲಿ ಸತ್ತ 7 ಜನರ ಪೈಕಿ ಇಬ್ಬರು ಮಹಾರಾಷ್ಟ್ರದವರಾಗಿದ್ದಾರೆ.

ರಾಜಕೀಯ ಸಮಸ್ಯೆಯಲ್ಲಿ ಕ್ರೀಡೆ ಮತ್ತು ಸಂಸ್ಕೃತಿ ವಿಚಾರಗಳನ್ನು ತರಬಾರದೆಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಇಂದು ಉಗ್ರರ ರೂಪದಲ್ಲಿ ಧರ್ಮ ಮತ್ತು ರಾಜಕೀಯದ ಜತೆಯಲ್ಲಿ ಸವಾಲಾಗಿ ನಮ್ಮೆದುರು ನಿಂತಿವೆ.

ಅವರ ಚೀಲದಲ್ಲಿ ಶಸ್ತ್ರಾಸ್ತ್ರಗಳ ಬದಲಿಗೆ ಗೋಮಾಂಸವಿದ್ದರೆ ಅವರು ಇಷ್ಟು ದಿನ ಜೀವಂತ ಇರುತ್ತಿದ್ದರೇ ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಗೋರಕ್ಷಕರದ್ದೇ ಇಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಅವರನ್ನು ನೀವೇಕೆ ಭಯೋತ್ಪಾದನೆ ನಿಗ್ರಹಕ್ಕೆ ಕಳಿಸಬಾರದೆಂದು ಬಿಜೆಪಿಗೆ ಸವಾಲೆಸೆದಿದ್ದಾರೆ.

No comments