ಪಾರ್ಶ್ವವಾಯು ಪೀಡಿತನಿಗೆ ಸ್ಪಂಧಿಸಿದ ಮುಖ್ಯ ಮಂತ್ರಿ
ಬೆಂಗಳೂರು : ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರ ಅಳಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿ ಧನ ಸಹಾಯ ಮಾಡಿದ ಪ್ರಸಂಗ ಗೃಹ ಕಚೇರಿ ಕೃಷ್ಣದಲ್ಲಿಂದು ನಡೆಯಿತು. ಗೃಹ ಕಚೇರಿ ಕೃಷ್ಣದಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನತಾದರ್ಶನಕ್ಕೆ ದೂರದೂರುಗಳಿಂದ ವೃದ್ಧರು, ಮಹಿಳೆಯರು, ವಿಕಲಚೇತನರು ಬಂದಿದ್ದರು. ಅವರಲ್ಲಿ ಪಾರ್ಶ್ವವಾಯು ಪೀಡಿತ ವೃದ್ಧರೊಬ್ಬರು ಇದ್ದರು. ಮೈ ಹುಷಾರಿಲ್ಲ. ಚಿಕಿತ್ಸೆ ಪಡೆಯಲು ಹಣವಿಲ್ಲ ಎಂದು ವೃದ್ಧ ಅಳಲು ತೋಡಿಕೊಂಡಾಗ ಮುಖ್ಯಮಂತ್ರಿಗಳು 500 ರೂ. ಮುಖ ಬೆಲೆಯ 19 ನೋಟುಗಳನ್ನು ಎಣಿಸಿ 9,500 ರೂ. ಧನ ಸಹಾಯ ಮಾಡಿದರು.
No comments