Breaking News

5 ಲಕ್ಷ ರು. ಗೆ ಬೇಡಿಕೆಯಿಟ್ಟಿದ್ದ ಕನ್ನಡ ಸಂಘಟನೆಯ ೧೧ ಜನರ ಬಂಧನ


ಬೆಂಗಳೂರು :ಕನ್ನಡ ಧ್ವಜದ ಚಪ್ಪಲಿ ಇದೆ ಎಂದು ಚಪ್ಪಲಿ ಅಂಗಡಿ ಮಾಲಿಕನಿಗೆ ೫ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಕನ್ನಡ ಸಂಘಟನೆ ೧೧ ಕಾರ್ಯಕರ್ತರನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ .

ಜೆಪಿ ನಗರದಲ್ಲಿ ಇರುವ ಬಟಾ ಶೋ ರೂಮ್ ನಲ್ಲಿ ಕನ್ನಡ ದ್ವಜದ ಚಪ್ಪಲಿ ಇದೆ ಎಂಬ ಕಾರಣಕ್ಕೆ ಅಂಗಡಿ ಮಾಲಿಕನಿಗೆ ೫ ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು ಇಲ್ಲವಾದರೆ ಪ್ರತಿಭಟನೆ ಮಾಡುವ ಬೆದರಿಕೆ ಹಾಕಿದ್ದರು ಈ ಸಂಬಂಧ ಆಂಗಡಿ ಮಾಲೀಕ ಜೆಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು .
ಈ ಕುರಿತು ತನಿಖೆ ನಡೆಸಿದ ಪೊಲೀಸರು ಕರ್ನಾಟಕ ಕಾರ್ಮಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಶ್ ,ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಶ ಪ್ರದೀಪ್ ನಾಯಕ್ ,ಸುವರ್ಣ ಕರ್ನಾಟಕ  ವೇದಿಕೆಯ ನಾಗರಾಜು ಮತ್ತು ವೀರೇಶ್ ಸೇರಿದಂತೆ ಒಟ್ಟು ೧೧ ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ .

No comments