Breaking News

ಪತ್ನಿ ಜತೆಯಿರುವ ಫೋಟೊ ಅಪ್‍ಲೋಡ್ ಮಾಡಿದ್ದಕ್ಕೆ ಇರ್ಫಾನ್ ಪಠಾಣ್‍ 'ಇಸ್ಲಾಂ ವಿರೋಧಿ ಅಂತೇ ?


ನವದೆಹಲಿ: ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿಯೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಯೊಂದನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. 

ಈ ಫೋಟೋಗೆ ಮೆಚ್ಚುಗೆಯ ಸುರಿಮಳೆಯ ಜತೆಗೆ ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್ ಧರಿಸದೆ ಮುಖ ತೋರಿಸಿದ್ದು ತಪ್ಪು. ಆಕೆ ಉಗುರಿಗೆ ನೈಲ್ ಪಾಲಿಶ್ ಹಚ್ಚಿಕೊಂಡಿದ್ದು ತಪ್ಪು. ಈ ರೀತಿ ಫೋಟೊ ತೆಗೆಸಿದ್ದು ಕೂಡಾ ಇಸ್ಲಾಂ ವಿರೋಧಿ ಎಂಬ ಕಾಮೆಂಟ್‍ಗಳು ಬಂದಿವೆ.

ಈ ಫೋಟೋವನ್ನು ಫೇಸ್‍ಬುಕ್‍ನಿಂದ ತೆಗೆಯಿರಿ. ಇದು ಒಬ್ಬ ಉತ್ತಮ ಮುಸ್ಲಿಂ ಆಗಿ ಈ ರೀತಿಯ ಫೋಟೊ ಹಾಕಬಾರದು. ಒಬ್ಬ ಪಠಾಣ್ ಮತ್ತು ಮುಸ್ಲಿಂ ಆಗಿರುವ ನೀವು ಆಕೆಯಲ್ಲಿ ಆಕೆಯ ತೋಳುಗಳನ್ನು ಮುಚ್ಚುವಂತೆ ಹೇಳಿ ಇದು ನಿಮ್ಮ ಕರ್ತವ್ಯ ಎಂಬ ನೀತಿ ಪಾಠಗಳೂ ಕಾಮೆಂಟ್‍ನಲ್ಲಿ ವ್ಯಕ್ತವಾಗಿವೆ.



No comments