Breaking News

ನೆಲದಡಿಯಲ್ಲಿ ಮನೆ ಮಾಡಿಕೊಂಡ ಜನ



ದಕ್ಷಿಣ ಆಸ್ಟ್ರೇಲಿಯಾದಲ್ಲಿರುವ ಒಂದು ಸಣ್ಣ ಗ್ರಾಮ ಕೂಬರ್ ಪೆಡಿ. ಈ ತಾಣದ ವಿಶೇಷತೆ ಏನೆಂದರೆ ಇಲ್ಲಿನ ಜನರು ನೆಲದಡಿಯಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿರುವುದು ನಾಗರೀಕ ಸಮಾಜವನ್ನು ನಾಚಿಸುವಂತಿದೆ.

ಆಸ್ಟ್ರೇಲಿಯಾದ ಅಡಿಲೇಡ್‌ನಿಂದ ೮೪೫ ಕಿ.ಮೀ. ದೂರದಲ್ಲಿರುವ ಈ ಪ್ರದೇಶವು ಓಪಲ್‌ನ ದೊಡ್ಡ ದೊಡ್ಡ ಪರ್ವತಗಳನ್ನು ಅಗೆದು ಸುಂದರವಾದ ಮನೆಗಳನ್ನು ನಿರ್ಮಿಸಿಕೊಂಡು ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ.

ಹೊರಗಿನಿಂದ ನೋಡಲು ಸಾಧಾರಣ ಓಪಲ್‌ನ ರಾಶಿಯಂತೆ ಕಾಣುವ ಈ ತಾಣದ ಒಳಗೆ ಹೋದರೆ ಹಲವಾರು ವಿಶೇಷತೆಗಳನ್ನು ನಾವು ಕಾಣಬಹುದು. ಇಲ್ಲಿರುವ ಐಷಾರಾಮಿ ಮನೆಗಳು ಯಾವುದೆ ಹೊಟೇಲ್‌ಗಳಿಗೆ ಕಡಿಮೆ ಇಲ್ಲದಂತಿವೆ.

ಓಪಲ್ ಎಂದರೆ ಹಾಲಿನ ಬಣ್ಣದ ಬೆಲೆಬಾಳುವ ಕಲ್ಲು. ಈ ಜಾಗ ಈ ವಿಶೇಷ ಕಲ್ಲಿನಿಂದಾಗಿಯೆ ಜನಪ್ರಿಯತೆ ಪಡೆದಿದೆ. ಮೊದಲು ಇಲ್ಲಿ ಜನರು ವಾಸ ಮಾಡುತ್ತಿರಲಿಲ್ಲ. ಇಲ್ಲಿ ೧೯೧೫ರಿಂದ ಮೈನಿಂಗ್ ಆರಂಭವಾಯಿತು. ಚುಕಿ ಕೂಬರ್ ಪೆಡಿ ಡೆಸರ್ಟ್ ಏರಿಯಾದಲ್ಲಿದೆ. ಆದುದರಿಂದ ಇಲ್ಲಿ ಬೇಸಿಗೆಯಲ್ಲಿ ಹೆಚ್ಚು ತಾಪಮಾನ ಇರುತ್ತದೆ ಹಾಗೂ ಚಳಿಗಾಲದಲ್ಲಿ ಹೆಚ್ಚು ಚಳಿ ಇರುತ್ತದೆ. ಇದರಿಂದಾಗಿ ಜನರಿಗೆ ಇಲ್ಲಿ ವಾಸಿಸುವುದು ಕಷ್ಟವಾಯಿತು.

ಈ ಸಂಕಷ್ಟವನ್ನು ನಿವಾರಣೆ ಮಾಡುವ ಸಲುವಾಗಿ ಜನರು ಈ ರೀತಿಯ ನೆಲದಡಿಯ ಮನೆಗಳನ್ನು ಅವಲಂಭಿಸಲು ಶುರು ಮಾಡಿದರು. ಈ ಮನೆಯಲ್ಲಿ ಎಸಿ ಬೇಕಾಗುವುದಿಲ್ಲ. ಜೊತೆಗೆ ಚಳಿಗಾಲದಲ್ಲಿ ಹೀಟರ್‌ನ ಅಗತ್ಯ ಕೂಡ ಇರೋದಿಲ್ಲ. ಇದೀಗ ಅಲ್ಲಿ ಸುಮಾರು ೧೫೦೦ ಮನೆಗಳಿದ್ದು, ಎಲ್ಲವೂ  ನೆಲದಡಿಯಲ್ಲಿಯೇ ನಿರ್ಮಾಣವಾಗಿವೆ. ಅಲ್ಲದೇ ಸುಮಾರು ೩.೫೦೦ ಮಂದಿ ವಾಸಿಸುತ್ತಿದ್ದಾರೆ. ಇವುಗಳನ್ನು ಡಗ್ ಔಟ್ಸ್ ಎಂದು ಕರೆಯಲಾಗುತ್ತದೆ.

ನೆಲದಿಂದ ಕೆಳಗೆ ಇರುವ ಈ ಮನೆಗಳು ಪೂರ್ತಿಯಾಗಿ ಆಧುನಿಕತೆಗೆ ಮಾರ್ಪಾಡಾಗಿದ್ದು, ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಸಹ ಹೊಂದಿವೆ. ಇಲ್ಲಿ ಹಲವಾರು ಹಾಲಿವುಡ್ ಚಿತ್ರಗಳ ಶೂಟಿಂಗ್ ಕೂಡ ಆಗಿವೆ. ಪಿಚ್ ಬ್ಯಾಕ್ ಚಿತ್ರದ ಶೂಟಿಂಗ್ ನಂತರ ಪ್ರೊಡಕ್ಷನ್ ಫಿಲಂನ ಸ್ಪೇಸ್‌ಶೀಪ್ ಇಲ್ಲಿಯೆ ಬಿಟ್ಟು ಹೋಗಿತ್ತು. ಇದೀಗ ಅದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

No comments