Breaking News

ಕೇರಳಕ್ಕೆ ಗೋಸಾಗಾಟ ವಾಹನ ಸಮೇತ ಬಿಡುಗಡೆಗೊಳಿಸಿದ ಪೊಲೀಸರು



ಮಂಗಳೂರು :ಲಾರಿಯೊಂದರಲ್ಲಿ ವಿಟ್ಲ ರಸ್ತೆ ಮೂಲಕ ಕೇರಳಕ್ಕೆ ೧೪ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಸಾರ್ವಜನಿಕರು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ತನಿಖೆ ನಡೆಸಿದಾಗ ಸಮರ್ಪಕ ದಾಖಲೆ ಹೊಂದಿದ್ದರಿಂದ ದನಗಳನ್ನು ಹಾಗೂ ವಾಹನಗಳನ್ನು ಬಿಡುಗಡೆಗೊಳಿಸಲಾಯಿತು.

ಪುತ್ತೂರು ಕಡೆಯಿಂದ ವಿಟ್ಲ ರಸ್ತೆ ಮೂಲಕ ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಅವುಗಳನ್ನು ಹಿಂಬಲಿಸಿಕೊಂಡು ಬಂದಿದ್ದಾರೆ. ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಲಾರಿಯನ್ನು ಅಡ್ಡಗಟ್ಟಿದ್ದಾರೆ. ಬಳಿಕ ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ. ವಿಟ್ಲ ಪೊಲೀಸರು ತನಿಖೆ ನಡೆಸಿದಾಗ ಬೆಳ್ತಂಗಡಿ ಸಮೀಪದ ಹೆಸರಾಂತ ಫಾಮ್ಸ್‌ಯೊಂದರಿಂದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿರುವ ಇನ್ನೊಂದು ಫಾರ್ಮ್ಸ್‌ಗೆ ದನಗಳನ್ನು ಸಾಗಾಟ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸರಿಗೆ ನೀಡಿದಾಗ ಇದು ಅಕ್ರಮ ಸಾಗಾಟವಲ್ಲ ಎಂಬುದು ಬೆಳಕಿಗೆ ಬಂದಿದೆ. ಅದಲ್ಲದೇ ಈ ಬಗ್ಗೆ ವಿಟ್ಲ ಎಸೈ ನಾಗರಾಜ್ ಅವರು ಸಂಬಂಧಪಟ್ಟ ಇಲಾಖೆಯಲ್ಲಿಯೂ ವಿಚಾರಿಸಿದಾಗಲೂ ಅಲ್ಲಿ ಅನುಮತಿ ಪಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಲಾರಿ ಹಾಗೂ ದನಗಳನ್ನು ಬಿಟ್ಟಿದ್ದಾರೆ.

ಒಂದು ಲಾರಿಯಾಗಿ ಬರೋಬ್ಬರಿ ೧೪ ದನಗಳನ್ನು ಸಾಗಾಟ ಮಾಡುವುದು ಸರಿಯೇ? ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

No comments