ಶರತ್ ಕೊಲೆ ಯತ್ನ ಪ್ರಕರಣ ಮಹತ್ವದ ಸುಳಿವು ಪತ್ತೆ?
ಬಂಟ್ವಾಳ: ಮಂಗಳವಾರ ರಾತ್ರಿ ಆರ್ ಎಸ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮೇಲೆ ನಡೆದ ಕೊಲೆ ಯತ್ನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬಿಸಿದ್ದು ಇದೀಗ ಪೋಲೀಸರಿಗೆ ಮಹತ್ವದ ಸುಳಿವು ದೊರೆತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸರಳ ವ್ಯಕ್ತಿತ್ವದ ಶರತ್ ಗ್ರಾಮದಲ್ಲಿ ಬಹಳಷ್ಟು ಸಮಾಜಮುಖಿ ಕೆಲಸ ಮಾಡುವ ಮುಖೇನಾ ಜನರ ಮೆಚ್ಚುಗೆ ಪಡೆದಿದ್ದರು ಈ ಹಿಂದೆ ನಗರದಲ್ಲಿ ನಡೆಯುತ್ತಿದ ಮರಳು ಮಾಫಿಯಾದ ವಿರುದ್ದ ತೊಡೆ ತಟ್ಟಿ ದಂದೆಕೊರರಿಗೆ ನಡುಕ ಹುಟ್ಟಿದ ಶರತ್ ಅವರು ಇದೀಗ ಅದೇ ದಂದೇ ಕೊರರಿಂದ ಕೊಲೆಯ ಯತ್ನ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದಲ್ಲದೆ ಶರತ್ ಮಡಿವಾಳ ಆರ್ ಎಸ್ ಎಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಕೆಲ ಮತಾಂದ ವ್ಯಕ್ತಿಗಳ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದ ಎಂದು ಹೇಳಲಾಗಿದೆ.
ನಗರದಲ್ಲಿ ಮರಳುಮಾಫಿಯಾದ ಮಾಸ್ಟರ್ ಮೈಂಡ್ ಈ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಹಾಗೂ ಈ ಕೊಲೆಗೆ ಕೇರಳದ ತಂಡವನ್ನು ಕರೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾ ಇದ್ದಾರೆ .
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿಂದು ಹಿತರಕ್ಷಣಾ ಸಮಿತಿ ಆರೋಪಗಳನ್ನು ಮಂದಿನ 24 ಗಂಟೆಯ ಒಳಗೆ ಬಂದಿಸದೆ ಇದ್ದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿವೆ.
No comments