ಶರತ್ ಮಡಿವಾಳ ಕೊಲೆ ಯತ್ನ ಪ್ರಕರಣ ಇಬ್ಬರ ಬಂಧನ
ಮಂಗಳೂರು : ಬಂಟ್ವಾಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮೇಲೆ ನಡೆದ ಕೊಲೆ ಯತ್ನಕ್ಕೆ ಸಂಭಂದಿಸಿದಂತೆ ಇದೀಗ ಪೋಲಿಸರು ಇಬ್ಬರು ಶಂಕಿತ ಆರೋಪಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ನಡೆಸುತ್ತಿದ್ದಾರೆ .
ಈ ಪ್ರಕರಣಕ್ಕೆ ಸಂಭದಿಸಿದ್ದಂತೆ ಪೋಲಿಸರ ಒಂದು ತಂಡ ಹತ್ತು ಜನರ ಮೇಲೆ ನಿಗ್ಗಾ ಇಟ್ಟಿದ್ದು ಇದೀಗ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಇದು ದ್ವೇಷದಿಂದ ನಡೆದ ಹಲ್ಲೆಯೊ ಅಥವಾ ಕೋಮುಗಲಭೆ ನಡೆಸಲು ಮಾಡಿದ ಹುನ್ನಾರವೋ ಎಂದು ತನಿಖೆಯಿಂದ ಹೋರ ಬರಬೇಕಾಗಿದೆ .
ಅತ್ತ ಶರತ್ ಸ್ಥಿತಿ ಜಿಂತಾಜನಕವಾಗಿದ್ದು ಕ್ಷಣ ಕ್ಷಣಕ್ಕೂ ಶರತ್ ಆರೋಗ್ಯ ಕ್ಷೀಣಿಸುತ್ತಾ ಇದ್ದು ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಬೀಡು ಬಿಟ್ಟಿದ್ದಾರೆ .
ಇತ್ತ ಜಿಲ್ಲೆಯಾದ್ಯಂತ ಶರತ್ ಅವರು ಗುಣಮುಖರಾಗಿ ಬರಲಿ ಎಂದು ಜಾತಿ ಮತ ಬೇದ ಮರೆತು ಪ್ರಾರ್ಥನೆ ಮಾಡುತ್ತಾ ಇದ್ದಾರೆ.ಒಟ್ಟಾರೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕೋಮು ದಳ್ಳುರಿಗೆ ಈ ಪ್ರಕರಣ ಸೇರುತ್ತಾ ಅನ್ನುವುದೆ ಯಕ್ಷ ಪ್ರಶ್ನೆಯಾಗಿದೆ
No comments