ತೀವ್ರಗಾಮಿಗಳಿಂದ ಕಿರುಕುಳ, ಹಿಂದೂ ಧರ್ಮ ಸ್ವೀಕರಿಸಿದ ಬಿಹಾರ ಮುಸ್ಲಿಂ ವಕೀಲ
ಪಾಟ್ನಾ: ಬಿಹಾರದಲ್ಲಿ ಮುಸ್ಲಿಂ ವಕೀಲರೊಬ್ಬರು ಆಶ್ಚರ್ಯಕರ ಸನ್ನಿವೇಶದಲ್ಲಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ನೆರೆಹೊರೆಯ ತೀವ್ರಗಾಮಿ ಮುಸ್ಲಿಮರು ಕಿರುಕುಳ ನೀಡುತ್ತಿದ್ದಾರೆ ಎಂಬ ಕಾರಣದಿಂದ 46 ವರ್ಷದ ಮೊಹಮದ್ ಅನ್ವರ್ ವೇದ ಮಂತ್ರಗಳ ನಡುವೆ ಮಂಗಳವಾರ ಹಿಂದೂ ಧರ್ಮ ಸ್ವೀಕರಿಸಿದರು. ಅವರೊಂದಿಗೆ ಅವರ ಪುತ್ರರಾದ ಮೊಹಮ್ಮದ್ ಅಮೀರ್(11), ಮೊಹಮ್ಮದ್ ಶಬೀರ್(9) ಕೂಡಾ ಹಿಂದೂ ಧರ್ಮಕ್ಕೆ ಮತಾಂತರವಾದರು . ನಂದನ
ಅನ್ವರ್ ತಮ್ಮ ಹೆಸರನ್ನು ಆನಂದ್ ಭಾರತಿ ಎಂದು ಬದಲಿಸಿಕೊಂಡರೆ, ತನ್ನ ಮಕ್ಕಳು ಅಮನ್ ಭಾರತಿ, ಸುಮನ್ ಭಾರತಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ಪತ್ನಿ ಘರ್ ವಾಪಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ ಎಂದು ಹೇಳಿದ್ದಾರೆ. ತನ್ನ ಪತ್ನಿ ಶಬ್ನಂ ಕೂಡಾ ಶೀಘ್ರದಲ್ಲೇ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ಆನಂದ್ ಭಾರತಿ ಹೇಳಿದ್ದಾರೆ.
ಬೇಗುಸರಾಯ್ ಜಿಲ್ಲೆಯ ಪೊಖಾರಿಯಾ ಪ್ರದೇಶದಲ್ಲಿ 18 ವರ್ಷಗಳಿಂದ ವಾಸಿಸುತ್ತಿದ್ದೇನೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ 12 ಮುಸ್ಲಿಮರ ನಡುವೆ ವಾಸಿಸುತ್ತಿದ್ದು, ಸ್ಥಳೀಯವಾಗಿ ಇಸ್ಲಾಂ ಗುತ್ತಿಗೆದಾರನೆಂದು ಹೇಳಿಕೊಳ್ಳುವ ಸೈಯದ್ ಕುಟುಂಬ ನನಗೆ ಕಳೆದ ಎರಡು ತಿಂಗಳುಗಳಿಂದ ಕಿರುಕುಳ ನೀಡುತ್ತಿದೆ. ನಾನು ನಮಾಜ್ ಹೆಚ್ಚಾಗಿ ಮಾಡುವುದಿಲ್ಲವೆಂದು, ನನ್ನ ಮನೆಯ ಮುಂದೆ ಮೂಳೆಗಳನ್ನು ಎಸೆದು ಕಿರುಕುಳ ನೀಡುತ್ತಿದ್ದಾರೆ, ಶರಿಯಾ ಕಾನೂನು ಪಾಲಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅನ್ವರ್ ಆರೋಪಿಸಿದ್ದಾರೆ. ನನ್ನನ್ನು ನಾನು ಮಾನವತಾವಾದಿಯಾಗಿ ಭಾವಿಸುತ್ತೇನೆ. ದೇವಾಲಯಗಳ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ನಾನು ಹೀಗೆ ಮಾಡುವುದು ನೆರೆಹೊರೆಯ ಮುಸ್ಲಿಮರಿಗೆ ಇಷ್ಟವಾಗಲಿಲ್ಲ. ನೀನು ಬೀಫ್ ಏಕೆ ತಿನ್ನುವುದಿಲ್ಲ? ನಿನ್ನ ಮಕ್ಕಳನ್ನು ಮದರಸಾಗೆ ಏಕೆ ಕಳುಹಿಸುವುದಿಲ್ಲ ಎಂದು ಪದೇ ಪದೇ ಪ್ರಶ್ನಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಇಸ್ಲಾಂ ಮೂಲ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು 40 ಜನ ಮುಸ್ಲಿಮರು ಎಚ್ಚರಿಸಿದರು, ಆದ್ದರಿಂದಲೇ ತಾನು ಧರ್ಮ ಬದಲಿಸಿದ್ದೇನೆ ಎಂದು ಹೇಳಿದ್ದಾರೆ. 46 ವರ್ಷ ವಯಸ್ಸಿನ ನಾನು ಸ್ವ ಇಚ್ಛೆಯಿಂದಲೇ ಈ ತೀರ್ಮಾನ ಕೈಗೊಂಡಿದ್ದೇನೆ, ಇದರ ಹಿಂದೆ ಯಾರ ಪಾತ್ರವೂ ಇಲ್ಲ ಎಂದರು.
ಅವರರು ನಮ್ಮನ್ನು ಭೇಟಿಯಾಗಿ ಹೀಗೆ ಹಿಂದೂ ಧರ್ಮ ಸ್ವೀಕರಿಸಬೇಕು ಎಂದು ಹೇಳಿ ರಕ್ಷಣೆ ಕೋರಿದರು. ಜೀವಕ್ಕೆ ರಕ್ಷಣೆಯಾಗಿ ಇರುತ್ತೇವೆ ಎಂದು ಭರವಸೆ ನೀಡಿದ್ದರಿಂದ ಅವರು ಹಿಂದೂ ಧರ್ಮ ಸ್ವೀಕರಿಸಿದರು ಎಂದು ಭಜರಂಗದಳ ಜಿಲ್ಲಾ ಕನ್ವೀನರ್ ಶುಭಂ ಭರದ್ವಾಜ್ ಹೇಳಿದ್ದಾರೆ.
No comments