ನಾನು ಕಾಂಗ್ರೆಸ್ ನಿಂದ ಮುಕ್ತ ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ನನ್ನಿಂದ ಮಕ್ತವಾಗಿಸಿದ್ದೇನೆ : ವಾಘೆಲಾ
ನವದೆಹಲಿ: ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ಬಿದ್ದಿದ್ದು, ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾ ಪಕ್ಷ ತೊರೆದಿದ್ದಾರೆ.
ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಲು ಆ ಪಕ್ಷದಿಂದಲೇ ಕಾಂಗ್ರೆಸ್ ‘ಸುಪಾರಿ’ ಪಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ವಘೇಲಾ ಆರೋಪ ಮಾಡಿದ್ದಾರೆ. ತಮ್ಮ 77ನೇ ಹುಟ್ಟುಹಬ್ಬ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಘೇಲಾ ಅವರು ಶುಕ್ರವಾರ ಈ ನಿರ್ಧಾರ ಪ್ರಕಟಿಸಿದರು.
ರಾಷ್ಟ್ರಪತಿ ಚುನಾವಣೆಯಲ್ಲಿಯೂ ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಏಟು ಬಿದ್ದಿತ್ತು. ರಾಜ್ಯದಲ್ಲಿ ಪಕ್ಷದ 57 ಶಾಸಕರಿದ್ದರೂ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ 49 ಮತಗಳಷ್ಟೇ ಬಿದ್ದಿದ್ದವು.
ಆರ್‌ಎಸ್‌ಎಸ್‌ನ ಮಾಜಿ ಕಾರ್ಯಕರ್ತ ವಘೇಲಾ ಅವರು ಈಗ ಗುಜರಾತಿನ ವಿರೋಧ ಪಕ್ಷದ ಮುಖಂಡ. ಈ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ. 20 ವರ್ಷಗಳ ಹಿಂದೆ ಬಿಜೆಪಿ ಬಿಟ್ಟು ರಾಷ್ಟ್ರೀಯ ಜನತಾ ಪಕ್ಷ ಸ್ಥಾಪಿಸಿದ್ದರು. ನಂತರ ಈ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದರು.
ಇಂದು ನಾನು ಕಾಂಗ್ರೆಸ್‌ನಿಂದ ಮುಕ್ತನಾಗಿದ್ದೇನೆ. ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ನನ್ನಿಂದ ಮುಕ್ತವಾಗಿಸಿದ್ದೇನೆ
News source
No comments