ಹೆಂಡತಿಗೆ ಶೌಚಾಲಯ ಕಟ್ಟಿಕೊಡಲ್ಲು ಸಾಧ್ಯವಿಲ್ಲದಿದ್ದರೆ ಹೆಂಡತಿಯನ್ನು ಮಾರಿ ಬೀಡಿ :ಜಿಲ್ಲಾ ಮ್ಯಾಜಿಸ್ಟ್ರೇಟ್ ಕನ್ವಲ್
ಪತ್ನಿಗಾಗಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದೇ ಇದ್ದರೆ, ಪತ್ನಿಯನ್ನು ಮಾರಿ ಬಿಡಿ ಎಂದು ಔರಂಗಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕನ್ವಲ್ ತನುಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಮ್ಹೋರ್ ಗ್ರಾಮದಲ್ಲಿ ಶುಚಿತ್ವ ಕುರಿತಂತೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕನ್ವಲ್ ತನುಜ್ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶೌಚಾಲಯಗಳು ಇಲ್ಲದೆ ಇರುವುದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಕೇವಲ 12 ಸಾವಿರ ರುಪಾಯಿ ವೆಚ್ಚವಾಗಲಿದೆ. ಪತ್ನಿಯ ಘನತೆಗಿಂತ 12 ಸಾವಿರ ರುಪಾಯಿ ದೊಡ್ಡದಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಶೌಚಾಲಯ ಕಟ್ಟಿಸಲು ಸಾಧ್ಯವಾಗದೇ ಹೋದರ ನಿಮ್ಮ ಹೆಂಡತಿಯನ್ನು ಹರಾಜಿನಲ್ಲಿ ಮಾರಿ ಬಿಡಿ ಎಂದು ಹೇಳಿದ್ದಾರೆ.
Posted by: VS | source Kp
No comments