Breaking News

ಚಿತ್ರಿಕರಣದ ವೇಳೆ ಅಸಭ್ಯ ವರ್ತನೆ ಒಳ್ಳೆ ಹುಡುಗ ಪ್ರಥಮ್ ಮೇಲೆ ಪ್ರಕರಣ ದಾಖಲು


ಬೆಂಗಳೂರು: ಪದೇಪದೇ ಒಂದಲ್ಲಾ ಒಂದು ವಿಷಯದಲ್ಲಿ ಹುಚ್ಚಾಟ ಮಾಡುತ್ತಿರುವ ಒಳ್ಳೆ ಹುಡುಗ ಪ್ರಥಮ್ ಇದೀಗ ಚಿತ್ರೀಕರಣದ ವೇಳೆ ಭುವನ್ ಪೊನ್ನಣ್ಣ ಕಾಲಿಗೆ ಕಚ್ಚಿ ಸುದ್ದಿ ಮಾಡಿಕೊಂಡಿದ್ದಾರೆ.

ಶನಿವಾರ ಸಂಜೆ ಸಂಜು ಮತ್ತು ನಾನು ಧಾರಾವಾಹಿಯ ಕೊನೆಯ ಹಂತದ ಚಿತ್ರೀಕರಣ ನಡೆಯುತಿದ್ದ ವೇಳೆ ಭುವನ್ ಹಾಗು ಪ್ರಥಮ್ ನಡುವೆ ಗಲಾಟೆ ನಡೆದಿದ್ದು ಗಲಾಟೆ ವಿಕೋಪಕ್ಕೆ ಹೋದ ಸಂದರ್ಭ ಪ್ರಥಮ್ ಭುವನ್ ಕಾಲಿಗೆ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಥಮ್ ವಿರುದ್ಧ ತಲಘಟಪುರ ಪೊಲೀಸ್ ಠಾಣೆಯಲ್ಲಿ ಭುವನ್ ದೂರು ದಾಖಲಿಸಿದ್ದಾರೆ. 

No comments