ಉಪ್ಪಿ ಮನೆಯಲ್ಲಿ ಬೀಮನ ಅಮವಾಸ್ಯೆ ಆಚರಣೆ ಹೇಗಿತ್ತು ಗೊತ್ತಾ ನೀವೇ ನೋಡಿ
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಭೀಮನ ಅಮವಾಸ್ಯೆಯ ಆಚರಣೆ ಪ್ರಮುಖವಾದದ್ದು. ಇಂದು ಭೀಮನ ಅಮವಾಸ್ಯೆ ಪ್ರಯುಕ್ತ ದೇವಸ್ಥಾನ, ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ವಿಶೇಷವಾಗಿ ಮದುವೆಯಾದ ಮಹಿಳೆಯರು ತಮ್ಮ ಪತಿಗೆ ಆಯುಷ್ಯ, ಆರೋಗ್ಯ ಅಭಿವೃದ್ಧಿ ಹಾಗೂ ತಾವು ದಿರ್ಘಕಾಲ ಸುಮಂಗಲಿಯಾಗಿ ಬಾಳಬೇಕು ಎನ್ನುವ ಉದ್ದೇಶದಿಂದ ಭೀಮನ ಅಮವಾಸ್ಯೆಯಂದು ವಿಶೇಷ ಪೂಜೆ ಮಾಡುತ್ತಾರೆ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಭೀಮನ ಅಮವಾಸ್ಯೆ ನಿಮಿತ್ತ ಇಂದು ಚೆಂದನವನದ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿಯೂ ವಿಶೇಷ ಪೂಜೆ ನಡೆದಿದೆ. ಉಪೇಂದ್ರ ಪತ್ನಿ ಪ್ರಿಯಾಂಕಾ ತಮ್ಮ ಪತಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ದೇವರ ಕೊಠಡಿಯಲ್ಲಿ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಅವರು ಉಪೇಂದ್ರ ಅವರ ಪಾದ ಪೂಜೆ ಮಾಡಿ ವಿಶೇಷ ರೀತಿಯಲ್ಲಿ ಆಚರಣೆ ಮಾಡಿದರು ಹಾಗೂ ಪ್ರಿಯಾಂಕ ಪೂಜೆ ಸಲ್ಲಿಸುತ್ತಿರುವ ಪೋಟೊವನ್ನು ಪ್ರಿಯಾಂಕಾ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
No comments