Breaking News

ಶರತ್ ಕೊಲೆ ಪ್ರಕರಣ ಎಸ್ಡಿಪಿಐ, ಪಿಎಫೈ ನಾಯಕರ ಬಂಧಿಸಿ, ಅಪರಾಧಿಗಳು ತನ್ನಿಂದ ತಾನೇ ಶರಣಾಗುತ್ತಾರೆ :ಗೋಪಾಲ್


ಮಂಗಳೂರು : ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ 10 ದಿನ ಕಳೆದರೂ ಆರೋಪಿಗಳ ಬಂಧನವಾಗಲಿಲ್ಲ ಇದರ ಹಿಂದೆ ಎಸ್ಡಿಪಿಐ, ಪಿಎಫೈ ನಾಯಕರ ಕೈವಾಡ ಇದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಜಿ ಆರೋಪಿಸಿದ್ದಾರೆ.
ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶರತ್ ಕೊಲೆ ಪ್ರಕರಣ ಎಸ್ಡಿಪಿಐ, ಪಿಎಫೈ ನಾಯಕರ ಬಂಧಿಸಿದರೆ ,ಅಪರಾಧಿಗಳು ತನ್ನಿಂದ ತಾನೇ ಶರಣಾಗುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೋಮ ಸಂಘರ್ಷ ಹುಟ್ಟು ಹಾಕಿದ ಪಿಎಫೈ ಮತ್ತು ಎಸ್‍ಡಿಪಿಐ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬದಲು ಅವರಿಗೆ ಬೆನ್ನೆಲುಬಾಗಿ ನಿಂತಿದೆ ಈ ಕಾರಣದಿಂದ ಅವರು ರಾಜಾರೋಷವಾಗಿ ತಿರುಗುತ್ತಿದ್ದಾರೆ ಎಂದರು.
ಹಿಂದೂ ಸಂಘಟನೆಯ ಮುಖಂಡರ ಮನೆಗೆ ಪೊಲೀಸರು ರಾತೋ ರಾತ್ರಿ ದಾಳಿ ನಡೆಸಿ ಅವರ ಮನೆಯವರಿಗೆ ಭೇದರಿಕೆ ಹಾಕಲು ಆಗುತ್ತದೆ. ಇಂತಹ ಘಟನೆಗಳು ಮುಂದುವರಿದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸರಕಾರವೇ ಹೊಣೆ ಎಂದು ವಿಹಿಂಪ ಸಂಘಟನಾ ಕಾರ್ಯದರ್ಶಿ ಗೋಪಾಲ್ ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ. 

No comments