Breaking News

ಅಪ್ಪಟ ಭಾರತೀಯ ಉಡುಗೆ ತೊಟ್ಟು ಮುಧುರೈ ದೇವಸ್ಥಾನದಲ್ಲಿ ಕಾಣಿಸಿಕೊಂಡ ಹೇಡನ್ತಮಿಳುನಾಡು : ಆಸ್ಟ್ರೇಲಿಯಾದ ಮಾಜಿ ಆಟಗಾರ  ಮ್ಯಾಥ್ಯೂ ಹೇಡನ್ ಭಾನುವಾರ  ಅಪ್ಪಟ ಭಾರತೀಯ ಉಡುಗೆ ಮುಖೇನಾ ಮುಧುರೈ ದೇವಸ್ಥಾನದಲ್ಲಿ ಕಾಣಿಸಿಕೊಂಡರು . TPL 2017 ರ ಉದ್ಘಾಟನೆಗೆ ಆಗಮಿಸಿದ ಹೇಡನ್ ಸಮೀಪದಲ್ಲಿ ಇದ್ದ ದೇವಸ್ಥಾನಕ್ಕೆ ಬೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು .

ಪೂಜೆ ಮುಗಿಸಿದ ಬಳಿಕ ನೇರವಾಗಿ ಮದುರೈ ನಾ ಪ್ರತಿಷ್ಠಿತ ಹೋಟೆಲ್  ಚಂದ್ರನ್ ಗೆ ಬೇಟಿ ನೀಡಿದ ಹೇಡನ್ ವಿವಿಧ ಬಗೆಯ ತಿಂಡಿಗಳನ್ನು ಸವಿಯುವ ಮೂಲಕ ಭಾರತೀಯ ರಾಯಲ್ ಔತಣಕೂಟವನ್ನು ಆನಂದಿಸಿದ್ದರು . ನಂತರ ಅಲ್ಲಿಂದ ಗಾಂಧಿ ಮೆಮೊರಿಯಲ್ ಮ್ಯೂಸಿಯಂಗೆ ತೆರಳಿದ ಹೇಡನ್ ಅಲ್ಲಿ  ಜನರನ್ನು ತನ್ನದೆ ಶೈಲಿಯಲ್ಲಿ  ಜನರನ್ನು ರಂಜಿಸಿದರು .ಅವರಿಗಾಗಿ ಏರ್ಪಡಿಸಿದ ಒಂದು ಕಾರ್ಯಕ್ರಮದಲ್ಲಿ ತಮಿಳಿನಲ್ಲಿ ಮತಾನಾಡುವ ಮುಖೇನಾ ನೆರೆದಿದ್ದವರನ್ನು ಮಂತ್ರ ಮುಗ್ದರಾಗಿಸಿದ್ದರು ಹಾಗೂ ರಜನಿಕಾಂತ್, ಅಜಿತ್ ವಿಜಯ್ ಅವರ ದ್ವನಿಯಲ್ಲಿ ಮಾತನಾಡಲು  ಪ್ರಯತ್ನಿಸಿ ನೆರೆದಿದ್ದ  ಜನರನ್ನು ರಂಜಿಸಿದ್ದರುNo comments