ಮಂಗಳೂರು ಮಸಾಜ್ ಸೆಂಟರ್ ಅಡ್ಡೆಗಳಿಗೆ ಮೇಯರ್ ದಾಳಿ
ಮಂಗಳೂರು : ಪಾಲಿಕೆ ಮೇಯರ್ ಕವಿತಾ ಸನಿಲ್ ಮತ್ತೆ ಸೆಲೂನ್, ಮಸಾಜ್ ಪಾರ್ಲರ್, ಸ್ಕಿಲ್ ಗೇಮ್ ಅಡ್ಡೆಗಳಿಗೆ ದಾಳಿ ನಡೆಸಿ ದಿಟ್ಟತನ ಮೆರೆದಿದ್ದಾರೆ. ಕಳೆದ ವಾರವಷ್ಟೇ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ನಡೆಯುತ್ತಿದ್ದ ಅಕ್ರಮ ಸ್ಕಿಲ್ ಗೇಮ್ ಅಡ್ಡೆಗೆ ಬೀಗ ಜಡಿದ ನಂತರ ಮತ್ತೆ ದಾಳಿ ಮುಂದುವರೆಸಿರುವ ಮೇಯರ್ ನೇತೃತ್ವದ ಪಾಲಿಕೆ ಅಧಿಕಾರಿಗಳು ನಗರದ ಬಲ್ಮಠ, ಬಿಜೈ ಬಳಿ ನಾಲ್ಕು ಮಸಾಜ್ ಪಾರ್ಲರ್ ಹಾಗೂ ಫಳ್ನೀರ್ ಬಳಿ ಒಂದು ಸ್ಕಿಲ್ ಗೇಮ್ ಅಡ್ಡೆಗೆ ದಾಳಿ ನಡೆಸಿ ಬೀಗ ಜಡಿದರು.
ಬಿಜೈನ ಓಲಿವಿಯಾ ಲೀಫ್ ಆಯುರ್ವೇದಿಕ್ ಥೆರಪಿ ಕೇಂದ್ರಕ್ಕೆ ದಾಳಿ ನಡೆಸಿ ಮಸಾಜ್ ನಿರತರಾಗಿದ್ದ ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಿಸಲಾಯಿತು. ಜ್ಯೋತಿ ಬಳಿ ಇರುವ ಪ್ಯಾರಾಡೈಸ್ ಯೂನಿಸೆಕ್ಸ್ ಬ್ಯೂಟಿ ಸ್ಪಾಗೆ ತೆರಳಿದಾಗ ಅದು ಮುಚ್ಚಿತ್ತು. ಕಲೆಕ್ಟರ್ಸ್ ಗೇಟ್ ಬಳಿ ಇರುವ ಗ್ರೀನ್ ವ್ಯಾಲಿ ಯೂನಿಸೆಕ್ಸ್ ಸೆಲೂನಿಗೆ ದಾಳಿ ನಡೆಯಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮೇಯರ್ ಕವಿತಾ, “ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ನನ್ನ ಉದ್ದೇಶವಾಗಿದೆ. ಯಾವುದೇ ಕಾರಣಕ್ಕೂ ಅನಧಿಕೃತ ಅಡ್ಡೆಗಳಿಗೆ ಅವಕಾಶ ನೀಡುವುದಿಲ್ಲ” ಎಂದರು.
-kale
No comments