Breaking News

ಸಿದ್ದರಾಮಯ್ಯ ರಾಜ್ಯಕಂಡ ಅವಿವೇಕಿ ಮುಖ್ಯಮಂತ್ರಿ : ಸುರೇಶ್ ಕಣೆಮರಡ್ಕ



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗು ಮಂಗಳೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಎಂದು  ದಕ್ಷಿಣ ಕನ್ನಡ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸುರೇಶ್ ಕಣೆಮರಡ್ಕ ಆರೋಪಿಸಿದ್ದಾರೆ .

ಮುಖ್ಯಮಂತ್ರಿ ಅವರ  ನೇತೃತ್ವದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಹಾಗು ಇನ್ನೋರ್ವ ಸಚಿವ ಯು.ಟಿ ಖಾದರ್ ಯವರು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆಯನ್ನು ದುರುಪಯೋಗಿಸಿಕೊಂಡು ಈ ಜಿಲ್ಲೆಯಲ್ಲಿ ಅಶಾಂತಿಯ ಭಯಭೀತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆಂದು ಎಂದು ಹೇಳಿದ್ದಾರೆ .


   ಬಂಟ್ವಾಳದಲ್ಲಿ  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಗೆ ಹಾಗು ಜಿಲ್ಲೆಯ ಸಚಿವರಿಗೆ ಈಗ ರಾಜಕೀಯ ಅಭದ್ರತೆಯ ಭಯ  ಕಾಡುತ್ತಿದ್ದು ಅದಕ್ಕಾಗಿ ಸಂಘಪರಿವಾರ ಹಾಗು ಬಿಜೆಪಿ ನಾಯಕರುಗಳ ಮೇಲೆ ಸುಳ್ಳು ಕೇಸು ದಾಖಲಿಸಿ ಮಧ್ಯರಾತ್ರಿಗಳಲ್ಲಿ ಮನೆಗಳಿಗೆ  ಪೋಲೀಸರ ಮೂಲಕ ದಾಳಿ ಮಾಡಿಸಿ ಮನೆಯ ಮಹಿಳೆಯರು ಹಾಗು ಮಕ್ಕಳಲ್ಲಿ ಭಯದ ವಾತಾವರಣ ಮೂಡಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಸರಕಾರದ ವೈಫಲ್ಯವನ್ನು ಮುಚ್ಚಿಡುವ ಯತ್ನ ನಡೆಯುತ್ತಿದೆ ಈ ಕೂಡಲೇ ನಾಯಕರ ಮೇಲಿನ  ಕೇಸುಗಳನ್ನು ಹಿಂಪಡೆದು ಶರತ್ ಕೊಲೆಗಡುಕರನ್ನು  ಶೀಘ್ರ ಬಂಧಿಸಬೇಕು ತಪ್ಪಿದಲ್ಲಿ ಮುಂದಿನ ಎಲ್ಲಾ ಅನಾಹುತಗಳಿಗೆ  ರಾಜ್ಯ ಸರಕಾರವೇ ನೇರ ಹೊಣೆಯೆಂದು ಎಚ್ಚರಿಕೆ ನೀಡಿದರು.

No comments