ನಾಳೆಯಿಂದ 200 ರೂ ಹೊಸ ನೋಟು ಚಲಾವಣೆ
ಬೆಂಗಳೂರು : ನೋಟು ಅಮಾನ್ಯದ ಬಳಿಕ ಎದುರಾಗಿದ್ದ ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ನಾಳೆಯಿಂದಲೇ ೨೦೦ ರೂಪಾಯಿ ನೋಟುಗಳನ್ನು ಚಲಾವಣೆಗೆ ಬಿಡಲು ನಿರ್ಧರಿಸಿದೆ.
ನಾಳೆಯಿಂದಲೇ ಎಲ್ಲಾ ಬ್ಯಾಂಕ್‌ಗಳಿಗೆ ೨೦೦ ರೂಪಾಯಿ ನೋಟುಗಳನ್ನು ಆರ್‌ಬಿಐ ಸರಬರಾಜು ಮಾಡಲು ಮುಂದಾಗಿದ್ದು ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ.
ನೋಟು ಅಮಾನ್ಯದ ಬಳಿಕ ಹೊಸದಾಗಿ ೨ ಸಾವಿರ ಮತ್ತು ೫೦೦ ರೂಪಾಯಿ ನೋಟು ಚಲಾವಣೆಗೆ ಬಿಟ್ಟ ಹಿನ್ನೆಲೆಯಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿತ್ತು.ಹೀಗಾಗಿ ಜನರು ತೊಂದರೆ ಅನುಭವಿಸುವಂತಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ ಆರ್‌ಬಿಐ ನಾಳೆಯಿಂದ ಚಲಾವಣೆಗೆ ತರಲು ಮುಂದಾಗಿದೆ.
No comments