Breaking News

ಬಕ್ರೀದ್ ಹಬ್ಬಕ್ಕೆ ಗೋವು,ಎತ್ತುಗಳನ್ನು ಬಲಿ ಕೋಡಬೇಡಿ ಮುಸ್ಲಿಂ ಮೌಲ್ವಿಗಳ ಮನವಿ


Suddi24×7ವರದಿ : ದೇಶದ ನಾನಾ ಭಾಗಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಮರ ಮೇಲೆ ಹಲ್ಲೆಯಾಗುತ್ತಾ ಇದ್ದು ಕಾರಣ ಮಾತ್ರ ಗೋ ಮಾಂಸ ಎಂದು ವರದಿಯಾಗುತ್ತಿದೆ. ಅದಕ್ಕೆ ಕಾರಣ ಕೆಲವು ಮುಸ್ಲಿಂ ಯುವಕರು ರಾತ್ರಿ ಹೊತ್ತಿನಲ್ಲಿ ಗೋವುಗಳನ್ನು ಕಳವು ಮಾಡಿ ಅದನ್ನು ಹತ್ಯೆ ಮಾಡಿ ಮಾಂಸವನ್ನು ಮಾರುತ್ತಾ ಇರುವುದು ಹೆಚ್ಚುತ್ತಿದ್ದು ಅದರಿಂದ ಆಕ್ರೋಶ ಗೊಂಡ ಕೆಲವು ಗೋ ರಕ್ಷರು ಮುಸ್ಲಿಮರ ಮೇಲೆ ದಾಳಿ ಮಾಡುತ್ತಾ ಇದ್ದಾರೆ ಆದರೆ ಹಲವು ಬಾರಿ ಗೋ ಮಾಂಸ ಬಿಟ್ಟು ಬೇರೆ ಮಾಂಸ ಕೊಂಡುಹೊಗುವ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಈ ಸಂಭಂಧ ಪ್ರಧಾನಿ ಮೋದಿಯವರು ಇಂತಹವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಇದೀಗ ಸಪ್ಟೆಂಬರ್ ಆರಂಭದಲ್ಲಿ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಬಂದಿದ್ದೆ ಬಲಿದಾನದ ಸಂಕೇತವಾದ ಈ ಹಬ್ಬಕ್ಕೆ ಪ್ರಾಣಿಗಳನ್ನು ಬಲಿಕೊಡುವುದು ಸರ್ವೆ ಸಾಮಾನ್ಯ ಆಡು,ಎತ್ತು,ಗೋ,ಒಂಟೆ ಹೀಗೆ  ಪ್ರಾಣಿಗಳ ಬಲಿಕೊಟ್ಟು ಅದರ ಮಾಂಸವನ್ನು ಬಡವರಿಗೆ ಹಂಚುವ ವಿಶೇಷ ಹಬ್ಬ ಇದಾಗಿದ್ದೆ ಆದರೆ ಮುಸ್ಲಿಂ ಸಮುದಾಯದ ಮುಖಂಡರಾದ ಸೈಯದ್ ಹಾಮಿದ್  ಹುಸೇನ್ ಶುತಾರಿ ಅವರು  ಈ ಬಾರಿಯ ಬಕ್ರೀದ ಹಬ್ಬಕ್ಕೆ ಗೋವು,ಎತ್ತುಗಳನ್ನು ಬಲಿ ಕೊಡಬೇಡಿ ಎಂದು ತಮ್ಮ ಸಮುದಾಯದ ಬಳಿ ಮನವಿ ಮಾಡಿಕೊಂಡಿದ್ದಾರೆ. ಗೋವಿನ ಹೆಸರಲ್ಲಿ ನಮ್ಮ ಸಮುದಾಯದ ಮೇಲೆ ದಬ್ಬಾಳಿಕೆಯ ನಡೆಯುತ್ತಿದೆ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಸಮುದಾಯದ ಕಣ್ಣು ಹಾಗಾಗಿ ನಮ್ಮ ಸಮುದಾಯದ ರಕ್ಷಣೆ ನಮ್ಮ ಹೊಣೆ ಎಂದರು .

No comments