Breaking News ಶರತ್ ಮಡಿವಾಳ ಕೊಲೆ ಪ್ರಕರಣ ಪ್ರಮುಖ ಆರೋಪಿ ಷರೀಫ್ ಬಂಧನ
ಆರ್'ಎಸ್'ಎಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಷರೀಫ್'ನನ್ನು ಪೊಲೀಸರು ಬಂಧಿಸಿದ್ದಾರೆ. ಜು.7ರಂದು ಮಂಗಳೂರಿನ ಬಿ.ಸಿ ರೋಡ್ ನಲ್ಲಿ ಎಫ್'ಝೆಡ್ ಬೈಕಿನಲ್ಲಿ ಬಂದಿದ್ದ ಪ್ರಮುಖ ಆರೋಪಿ ಷರೀಫ್ ಸೇರಿದಂತೆ ಕಲಂದರ್ ಶಾಫಿ, ಇಬ್ರಾಹಿಂ ಆಗಮಿಸಿ ಶರತ್ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದರು
ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್'ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಒಂದು ವಾರದ ನಂತರ ಕೊನೆಯುಸಿರೆಳೆದರು.
ಈ ಹತ್ಯೆಯ ಬಳಿಕ ಕರಾವಳಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು ಪೊಲೀಸರು ಹಲವು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದರು ಇದೊಂದು ಕೊಮು ವೈಷಮ್ಯದ ಕೊಲೆಯಾಗಿದ್ದು ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ ಎನ್ನಲಾಗಿತ್ತು ಸದ್ಯ ಬಂಧಿತರೆಲ್ಲರು ಪಿಎಪ್ ಐ ಎಂಬ ಉಗ್ರ ಸಂಘನೆ ಕಾರ್ಯರ್ಕತರು ಎನ್ನಲಾಗಿದೆ
ಪ್ರಕರಣ ಸಂಬಂಧ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ.
No comments