Breaking News: ಉತ್ತರಪ್ರದೇಶ ಮುಜಫ್ಪರ್ ನಗರದಲ್ಲಿ ಹಳಿ ತಪ್ಪಿದ ರೈಲು
ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಕಾಲಿಂಗ-ಉತ್ಕಾಲ್ ಎಕ್ಸ್’ಪ್ರೆಸ್’ನ 6 ಭೋಗಿಗಳು ಹಳಿತಪ್ಪಿದ್ದು ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ. 34 ಮಂದಿ ಗಾಯಗೊಂಡಿದ್ದಾರೆ.
ಉತ್ಕಾಲ್ ಎಕ್ಸ್’ಪ್ರೆಸ್ ಪುರಿಯಿಂದ ಹರಿದ್ವಾರ-ಕಾಳಿಂಗ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಮುಜಫ್ಫರ್ ನಗರದ ಬಳಿ ಹಳಿ ತಪ್ಪಿದೆ. ಜಿಲ್ಲಾಡಳಿತವು ರಕ್ಷಣಾ ಕಾರ್ಯವನ್ನು ಆರಂಭಿಸಿದ್ದು ಎನ್’ಡಿಆರ್’ಎಫ್ ಪಡೆಯನ್ನು ದೆಹಲಿಯಿಂದ ಕಳುಹಿಸಲಾಗಿದೆ. ಭೋಗಿಗಳಡಿಯಲ್ಲಿ ಸಿಲುಕಿಕೊಂಡವರ ಮಾಹಿತಿಯಿನ್ನೂ ಲಭ್ಯವಾಗಿಲ್ಲ.
ಅಪಘಾತದ ಬಗ್ಗೆ ಕೆಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಟ್ವಿಟ್ ಮಾಡಿದ್ದು ಪ್ರಕರಣ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ
https://twitter.com/sureshpprabhu/status/898900601102147586
No comments