ಮತಾಂತರಗೊಳ್ಳಲು ಕೇರಳದ ಪೊನ್ನಾನಿಗೆ ಕರೆದೊಯ್ಯುಲು ಯುವತಿಗೆ ಕಿರುಕುಳ ಯುವಕನ ಮೇಲೆ ಪೊಸ್ಕೊ ಕಾಯ್ದೆ
ಪುತ್ತೂರು- ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಯುವಕನೊಬ್ಬ ಪ್ರೇಮದ ಬಲೆಗೆ ಸಿಲುಕಿಸಿ, ಕಿರುಕುಳ ನೀಡಲು ಯತ್ನಿಸಿದ ಘಟನೆಯೊಂದು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಇದೀಗ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು, ತನ್ನನ್ನು ಪ್ರೀತಿಸಿ ವಿವಾಹವಾಗುವಂತೆ ಪೀಡಿಸತೊಡಗಿದ್ದ ಮತ್ತು ಬೆದರಿಕೆಯೊಡ್ಡುತ್ತಿದ್ದ ಯುವಕ ಪುತ್ತೂರು ತಾಲೂಕಿನ ಪಾಲ್ತಾಡು ಗ್ರಾಮದ ಮುರ್ಕೆತ್ತಿ ನಿವಾಸಿ ಮಹಮ್ಮದ್ ಹಕೀಂ ಯಾನೆ ಹಕೀಂ ಎಂಬಾತನ ವಿರುದ್ದ ಇದೀಗ ಬೆಳ್ಳಾರೆ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಿನ್ನ ಸ್ನೇಹಿತೆಯರ ಫೋನ್ ನಂಬರ್ ಕೊಡಬೇಕು. ನನಗೆ ಹಲವಾರು ಸ್ನೇಹಿತರಿದ್ದಾರೆ. ಅವರು ಲವ್ ಮಾಡಲು ನೀನು ಸಹಕಾರ ಕೊಡಬೇಕು ಎಂದು ಈಕೆಯ ಕೈಯಿಂದ ಫೋನ್ ನಂಬರ್ ಪಡೆಯಲೂ ಯತ್ನಿಸಿದ ಈತನ ಕಿರುಕುಳ ಕಳೆದ ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗಿತ್ತು. ಆತನ ಬೆದರಿಕೆಗೆ ಮಣಿದ ವಿದ್ಯಾರ್ಥಿನಿ ಈ ವಿಚಾರವನ್ನು ಮುಚ್ಚಿಟ್ಟಿದ್ದಳು. ಇದೀಗ ಆರೋಪಿಯ ಕಿರುಕುಳ ವಿಪರೀತಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ.
ಆರೋಪಿ ಹಕೀಂ ನೀಡುತ್ತಿದ್ದ ಕಿರುಕುಳದಿಂದ ನೊಂದ ವಿದ್ಯಾರ್ಥಿನಿ ಗುರುವಾರ ಆತನ ವಿರುದ್ದ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾಳೆ. ಬೆಳ್ಳಾರೆ ಠಾಣೆಯ ಪೊಲೀಸರು ಆರೋಪಿಯ ವಿರುದ್ದ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಆರೋಪಿ ಯುವಕ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬೆಳ್ಳಾರೆ ಪೊಲೀಸರು ಬಲೆಬೀಸಿದ್ದಾರೆ.
ಈ ಹಿಂದೆಯೂ ನಡೆದಿತ್ತೊಂದು ಪ್ರಕರಣ
ಕಳೆದ ಕೆಲವು ವರ್ಷಗಳ ಹಿಂದೆ ಇದೇ ವ್ಯಾಪ್ತಿಯ ಪರಿಶಿಷ್ಟ ಜಾತಿಯ ಯುವತಿಯೊಬ್ಬಳನ್ನು ಪೊನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡುವ ಪ್ರಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಯುವತಿಯನ್ನು ಪೊನ್ನಾನಿಯಲ್ಲಿ ಪತ್ತೆ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಇದೀಗ ಎರಡನೇ ಪ್ರಕರಣ ನಡೆದಿರುವುದು ಈ ಪ್ರಕರಣ ಗಂಭೀರತೆ ಪಡೆದಿದೆ.
ಅಪ್ರಾಪ್ತ ವಯಸ್ಸಿನ ಈ ವಿದ್ಯಾರ್ಥಿನಿ ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಹಕೀಂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ತನ್ನನ್ನು ಪ್ರೀತಿಸುವಂತೆ ಪೀಡಿಸತೊಡಗಿದ್ದ. ಅಲ್ಲದೆ ವಿವಾಹಕ್ಕೆ ಒಪ್ಪಿಕೊಳ್ಳುವಂತೆ ಒತ್ತಡ ಹಾಕತೊಡಗಿದ್ದ. ರಂಝಾನ್ ತಿಂಗಳಲ್ಲಿ ಉಪವಾಸವಿರಬೇಕು. ಹಣೆಗೆ ಬೊಟ್ಟು ಇಡಬಾರದು. ತಲೆಗೆ ಹೂ ಮುಡಿಯಬಾರದು ನಿನ್ನನ್ನು ಕೇರಳದ ಪೊನ್ನಾನಿಗೆ ಕರೆದುಕೊಂಡು ಹೋಗುವುದಾಗಿ ಎಂದು ಈಕೆಗೆ ತಾಕೀತು ಮಾಡಿರುವುದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ನಿನ್ನ ಮಾನಹರಣ ಮಾಡುವುದಾಗಿ ಮತ್ತು ತಂದೆಯ ಅಂಗಡಿ ಕಟ್ಟಡಕ್ಕೆ ಬೆಂಕಿ ಕೊಡುವುದಾಗಿ ಬೆದರಿಸಲಾರಂಭಿಸಿದ್ದ ಎನ್ನಲಾಗಿದೆ.
No comments