Breaking News

ಐಟಿ ದಾಳಿ ಮಾಡಿದ್ದು ತಪ್ಪಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲೆ ನಿವಾಸ ಕಛೇರಿ ಮೇಲೆ ನಿರಂತರವಾಗಿ ನಡೆದ ಐಟಿ ದಾಳಿಯಲ್ಲಿ ದಾಖಲೆ ಇಲ್ಲದ‌ 7.5 ಕೋಟಿ  ಹಣ, ಆಸ್ತಿಪತ್ರಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಕಾರ್ಯಚರಣೆ ಮಂದುವರಿಸಿದ್ದಾರೆ .

ದಾಳಿ ಸಂಬಂಧ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಐಟಿ ದಾಳಿ ಮಾಡಿದ್ದು ತಪ್ಪಲ್ಲ ಆದರೆ ಮಾಡಿದ ಸಮಯ ಮಾತ್ರ ತಪ್ಪು ಎಂದಿದ್ದಾರೆ . ಗುಜರಾತ್ ಶಾಸಕರು ಬಂದ ಸಂದರ್ಭದಲ್ಲಿ ಈ ದಾಳಿ ಮಾಡುವ ಅಗತ್ಯ ಇರಲಿಲ್ಲ  ಇದು ರಾಜಕೀಯ ದ್ವೇಷದ ದಾಳಿ ಎಂದು ಕಿಡಿಕಾರಿದರು .

ಬಿಜೆಪಿ ಐಟಿ ಇಲಾಖೆಯನ್ನು ನಮ್ಮ ಮೇಲೆ ಪ್ರಯೋಗಿಸಿದರೆ ನಾವು ಹೆದರುವ ಪ್ರಶ್ನೆಯೆ ಇಲ್ಲ ಇದನ್ನು ಸೂಕ್ತವಾಗಿ ಎದುರಿಸುತ್ತೆವೆ ರಾಜಕೀಯವನ್ನು ಈ ರೀತಿಯಲ್ಲಿ ಬಳಸಿಕೊಂಡು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ ಜನರೆ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.

No comments