Breaking News

ಬ್ಯಾಟ್ ಹಿಡಿದ ಕೈ ಬಡವರ ಪಾಲಿಗೆ ಸಂಜೀವಿನಿಯಾದ ರೋಚಕ ಕಥೆ ತಪ್ಪದೇ ಓದಿ



ನವದೆಹಲಿ: ನವದೆಹಲಿ: ನಕ್ಸಲ್ ದಾಳಿಗೆ ಮೃತರಾದ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ನೆರವಿಗೆ ಮುಂದಾಗಿದ್ದ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ತಮ್ಮ ಫೌಂಡೇಷನ್ ಮೂಲಕ ಬಡವರ ಹಸಿವು ನೀಗಿಸುವ ಯತ್ನ ನಡೆಸಿದ್ದಾರೆ.

ದೆಹಲಿಯಲ್ಲಿ ತಮ್ಮ ಗೌತಮ್ ಗಂಭೀರ್ ಫೌಂಡೇಷನ್ ಮೂಲಕ ಉಚಿತವಾಗಿ ಬಡವರಗೆ ಊಟ ನೀಡುವ ಕ್ಯಾಂಟೀನ್ ಒಂದನ್ನು ತೆರೆದಿದ್ದಾರೆ. ವಿಶ್ವಕಪ್, ಐಪಿಎಲ್ ನಂತಹ ಮಹಾನ್ ಗೆಲುವುಗಳೇ ನನ್ನ ಈ ಕೆಲಸಕ್ಕೆ ಪ್ರೇರಣೆ ಎಂದು ಅವರು ಹೇಳಿಕೊಂಡಿದ್ದಾರೆ.



ಕ್ಯಾಂಟೀನ್ ಆರಂಭಿಸಿದ ಮೊದಲ ದಿನ ಸ್ವತಃ ಗಂಭೀರ್ ತಾವೇ ಊಟ ಬಡಿಸಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಫೋಟೋ ಹಾಕಿರುವ ಗಂಭೀರ್ ‘ನನ್ನ ಹೃದಯದಲ್ಲಿ ಸಹಾನುಭೂತಿ, ಕೈಯಲ್ಲಿ ಒಂದು ಪ್ಲೇಟ್ ತುಟಿಯಲ್ಲಿ ಪ್ರಾರ್ಥನೆ, ಯಾರೂ ಹಸಿವಿನಿಂದ ಮಲಗಬೇಡಿ’ ಎಂದು ಸಂದೇಶ ಬರೆದಿದ್ದಾರೆ. ಕ್ರಿಕೆಟಿಗನ ಈ ಮಾನವೀಯ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

No comments