ದೇಶಕ್ಕೆ ಮಾದರಿಯಾದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೆಂದ್ರದ ಶಿಕ್ಷಣ ಹೇಗಿದೆ ಗೊತ್ತಾ ನೀವೆ ಓದಿ
ಅದು ನಾನು ಉನ್ನತವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿದ್ದ ಸಮಯ! ಹೋಸದಿಗಂತ ಪತ್ರಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅರ್ಥಶಾಸ್ತ್ರ ವಿಭಾಗಲ್ಲಿ ಒಂದು ಕೆಲಸವಿರುವ ಜಾಹಿರಾತು ನೋಡಿದೆ...
ಮರುದಿನವೇ ಕಲ್ಲಡ್ಕಕ್ಕೆ ಹೋದ ನಾನು ಅಲ್ಲಿನ ಪದವಿಗೆ ಕಾಲೇಜ್ ಗೆ ಹೋದೆ ಹೋದ ಕೂಡಲೇ ಒಂದು ದೊಡ್ಡ ಮರದ ರಾಮನ ಮೂರ್ತಿ.ಸಣ್ಣ ಶಿವನ ವಿಗ್ರಹ ಶ್ರದ್ದೆ ಅಲ್ಲಿಗೆ ಕಾಲಿಟ್ರೆನೆ ಬರೋ ಹಾಗಿತ್ತು ಆಮೇಲೆ ಪ್ರಾಂಶುಪಾಲರನ್ನು ಕಂಡು ಅರ್ಜಿಯನ್ನು ಸಲ್ಲಿಸಿ ಬಂದೆ...!
2ದಿನ ಕಳೆದು ಡೆಮೋ ಕೊಡಲು ನನ್ನನ್ನು ಕರೆದರು...ತರಗತಿಗೆ ಹೋದ ಕೂಡಲೇ ಎದ್ದು ನಿಂತು ಜೈ ಶ್ರೀರಾಮ್ ಹೇಳೋ ಮಕ್ಕಳು..ಏನೋ ದೇವಸ್ಥಾನಕ್ಕೆ ಬಂದಿದ್ದೀನಾ ಅಥವಾ ಕಾಲೇಜಿಗಾ? ಅಂತ ನನಿಗೆ ಅನಿಸಿದ್ದು ಸುಳ್ಳಲ್ಲ..!
1ದಿನ ಕಳೆದು ನನ್ನನ್ನು ಸಂದರ್ಶನಕ್ಕೆ ಕರೆದರು..ಅದು ನೇರವಾಗಿ ಡಾ ಪ್ರಭಾಕರ್ ಭಟ್ ಜಿ ಯನ್ನು ಭೇಟಿಯಗೊ ಮೊದಲ ಅವಕಾಶ..ಏನೋ ಮುಜುಗರ,ಏನೋ ಭಯ...ಎನ್ ಕೇಳ್ತಾರೋ ಏನೋ.. ಎನ್ ಹೇಳ್ತಾರೋ ಏನೋ ಅನ್ಕೊಂಡು ಭಯದಿಂದಲೇ ಒಳಗೆ ಹೋದೆ.. ನಗು ಮುಖದಿಂದ ಬನ್ನಿ ಬನ್ನಿ ಅಂತ ಗೌರವ ದಿಂದ ಅಷ್ಟು ದೊಡ್ಡ ವ್ಯೆಕ್ತಿ ನನ್ನನ್ನು ಕರೆದಾಗಲೇ ನಂಗೆ ಅವ್ರ ವೇಕ್ತಿತ್ವದ ಪರಿಚಯ ಆಯ್ತು..
ಮೋದಿ ಬಗ್ಗೆ ಗೊತ್ತಾ? ಮೋದಿ ಪ್ರಮಾಣವಚನ ಸ್ವಿಕರಿಸಿದ ಹಿಂದಿನ ದಿನ ಎನ್ ಮಾಡಿದ್ರು ಗೊತ್ತಾ? ಅಂತ ನಯವಾಗಿ ಕೇಳಿದ್ರು... ರಾಜ್ಯದಲ್ಲೇ ಅತ್ಯಂತ ಪ್ರಭಾವಶೀಲ ವ್ಯಕ್ತಿ, ಹಿಂದುಸಮಾಜೋತ್ಸವದಲ್ಲಿ ಖಡಕ್ ಮಾತಾಡೋ ಭಟ್ರು ಇವ್ರೆನಾ??ಅನಿಸ್ತು...??ತುಂಬಾ ಸರಳ ವ್ಯಕ್ತಿ...ಅವ್ರು!
ಕಾಲೇಜಿಗೆ ಆಯ್ಕೆ ಆದ ನಂತ್ರ ಬೆಳಗಿನ ನಿತ್ಯ ನಡೆಯುವ ಸರಸ್ವತಿ ವಂದನಾ ದಲ್ಲಿ ಎಲ್ಲಾ ಮಕ್ಕಳು ಸೇರಿದ್ರು...ನೆಲದಮೇಲೆ ಶಿಸ್ತುಬದ್ದ ವಾಗಿ ಕುಳಿತು ಮಕ್ಕಳು ಸರಸ್ವತಿಯನ್ನು ವಂದಿಸುವ ವಂದನೆಯನ್ನು ನೋಡಲು ಎಡರು ಕಣ್ಣು ಸಾಲಲ್ಲ...ಕೇಳಲು ಎರಡು ಕಿವಿ ಸಾಕಗಲ್ಲ.. ಅವತ್ತೇ ನನಿಗಣಿಸಿದ್ದು ನನ್ನ ಜೀವನ ಸಾರ್ಥಕ ಆಯ್ತು ಅಂತ..ಮೈ ರೋಮಾಂಚನ ಆಯ್ತು. ಹೀಗೂ ಒಂದು ಕಾಲೇಜ್ ಉಂಟಾ? ಇವಾಗಿನ ಮಕ್ಕಳು ಹೀಗೂ ಇದ್ದಾರಾ ಅನಿಸ್ತು!!
ಅಂತಾ ಮಕ್ಕಳಿಗೆ ನಾನು ಪಾಠ ಮಾಡೋದ??ಅಂತ ನನ್ನ ಬಗ್ಗೆ ನಂಗೇನೆ ನಾಚಿಕೆ ಆಯ್ತು...
ಅಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಗುರುಗಳ ಬಗ್ಗೆ ಹೊಂದಿರುವ ಗೌರವ ಅಪಾರ.ಎಲ್ಲಿಕಂಡರು ಕೂಡ ಎದುರು ಬಂದು ಎರಡು ಕೈ ಮುಗಿದು ನಗು ಮುಖದಿಂದ ಜೈಶ್ರೀರಾಮ್ ಹೇಳುವರು.ಹುಟ್ಟಿದ ಹಬ್ಬದ ದಿನ ಸಿಹಿ ಕೊಟ್ಟು ಪ್ರತಿವಿದ್ಯಾರ್ಥಿಯು ಕೂಡ ಶಿಕ್ಷಕರ ಕಾಲಿಗೆ ಬಿದ್ದು ಆಶೀರ್ವಾದ ಪಡಿಯೋದು ವಿಶೇಷ..
ಮದ್ಯಾಹ್ನ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ಊಟದ ವ್ಯವಸ್ಥೆ ಇದೆ.ಸಲಾಗಿ ಕೂತು ಭೋಜನ ಮಂತ್ರದ ಜತೆಗೆ ಊಟ ಮಾಡೋದು ವಿಶೇಷ.ರಕ್ಷಾಬಂಧನದ ದಿನ ಸಹೋದರಿಯರು ರಕ್ಷೆ ಕಟ್ಟೋದು ಇನ್ನೊಂದು ಗಮನಾರ್ಹ ವಿಷಯ.
ಈಗಿನ ಕಾಲದಲ್ಲಿ ಒಂದು ದಿನದ ಪ್ರವಾಸ ಆಯೋಜನೆ ಮಾಡಲು ಕಾಲೇಜು ಆಡಳಿತಮಂಡಳಿ, ಪ್ರಾಂಶುಪಾಲರು ಹಿಂದೇಟು ಹಾಕೋದನ್ನು ನೋಡಬಹುದು ಅಂತದ್ರಲ್ಲಿ... ಇಲ್ಲಿ "ಭಾರತದರ್ಶನ" ಎನ್ನುವ 10 ದಿನದ ಪ್ರವಾಸವನ್ನು ಆಯೋಜನೆ ಮಾಡಲಾಗುತ್ತದೆ. ಉತ್ತರಭಾರತದ ಕಾಶ್ಮೀರ,ಹಿಮಾಚಲ ಪ್ರದೇಶ,ಪಂಜಾಬ್,ರಾಜಸ್ತಾನ,ದೆಹಲಿ,ಗುಜರಾತ್, ಮಹಾರಾಷ್ಟ್ರ ಮುಂತಾದ ಪ್ರವಾಸಿ ತಾಣವನ್ನು ನೋಡುವಭಾಗ್ಯ ಕಲ್ಲಡ್ಕದ ಮಕ್ಕಳದ್ದು.ಅದು ಕೂಡ ಬರೀ 3000ಸಾವಿರ ರೂಪಾಯಿಗೆ....ಸ್ವತಃ ಪ್ರಭಾಕರ್ ಭಟ್, ಅವ್ರ ಧರ್ಮಪತ್ನಿ,ಮಗಳು ಲಕ್ಸ್ಮಿಅಕ್ಕ ಕೂಡ ಈ ಪ್ರವಾಸದಲ್ಲಿ ಕೆಲವುಸಲ ಭಾಗವಹಿಸಿದ್ದು ಉಂಟು. ಸ್ವತಃ ಮಕ್ಕಳೊಂದಿಗೆ ಮಕ್ಕಳಾಗಿರುವ ಮನಸ್ಥಿತಿ ಅವರದ್ದು.
ಇಡೀ ದೇಶದ ಗಮನ ಸೆಳೆಯುವ ಕ್ರೀಡೋತ್ಸವ ನೋಡೋದೇ ಒಂದು ಚಂದ..ಮಲ್ಲಕಂಬ,
ಕುಣಿತಭಜನೆ,ಸಂಚಲನ,
ನಿಯುದ್ದ,ಕೋಲಾಟ, ಜಡೆಕೋಲಾಟ,ಬೈಕ್ ಸಾಹಸ,ಸೈಕಲ್ ಸವಾರಿ, ಕುದುರೆ ಸವಾರಿ ಮುಂತಾದ ವಿಭಾಗದಲ್ಲಿ ಮಕ್ಕಳು ಭಾಗವಹಿಸುದ್ದನ್ನು ನೋಡೋಕೆ 2 ಕಣ್ಣು ಸಾಲದು..ಸ್ವತಃ ನಿತಿನ್ ಗಡ್ಕರಿ ಇದಕ್ಕೆ ಸಾಕ್ಷಿ.2013ರಲ್ಲಿ ಅವ್ರು ಈ ಕಾರ್ಯಕ್ರಮ ನೋಡಿ ಮಕ್ಕಳನ್ನು ಹೋಗಳಿದ್ದೆ ಹೊಗಳಿದ್ದು... ಅಲ್ಲಿ ಮಕ್ಕಳಿಗೆ ಕೊಡುವ ತರಬೇತಿ ಕೂಡ ಅಧ್ಭುತ..
ಇನ್ನು ಕಾಲೇಜಿನ ಕ್ಯಾಂಪಸ್ನಲ್ಲಿ "ವಸುಧಾರ" ಎನ್ನುವ ಗೋಶಾಲೆ ಒಂದಿದೇ. ಅದರಲ್ಲಿ 10 ದನಗಳು,3 ಕುದುರೆಗಳಿವೆ. 3 ಸಣ್ಣ ಕರುಗಳಿವೆ. ಆ ಕರುಗಳ ಜೋತೆಗೆ ಸಣ್ಣಮಕ್ಕಳು ಆಡೋದೇ ಚಂದ.ಎನ್ ಮುದ್ದು ಮಾಡ್ತಾರೆ ಗೊತ್ತಾ ಆ ಕರುಗಳನ್ನು...!!!
ಇದಲ್ಲದೆ ಮೊಲ,ಪಾರಿವಾಳ, ಬಾತುಕೋಳಿಗಳು, ಎಮು,ಟರ್ಕಿಯ ಕೋಳಿ ಮುಂತಾದ ಪ್ರಾಣಿಪಕ್ಷಿ ಗಳಿವೆ...ಸದಾ ಅದರ ಜತೆಗೆ ಮಕ್ಕಳ ಒಡನಾಟವಿದೆ..!
ಅಲ್ಲಿರುವಂಥಹ ಪ್ರತಿಯೊಬ್ಬ ವ್ಯಕ್ತಿ ಅಂದ್ರೆ ವಿದ್ಯಾರ್ಥಿ ಕೂಡ ಮರ್ಯಾದಾ ಪುರುಷೋತಮ್ಮ ಪ್ರಭು ಶ್ರೀರಾಮಚಂದ್ರನ ಪ್ರತಿಬಿಂಬ. ಹನುಮಂತನ ಶ್ರದ್ಧೆ ಅವರದ್ದು....ಸಾಕ್ಷಾತ್ ದೇವಸ್ಥಾನ ಇದ್ದಹಾಗೆ ಆ ವಿದ್ಯಾಸಂಸ್ಥೆ...!
ಒಟ್ಟು 3200ವಿದ್ಯಾರ್ಥಿಗಳು.150 ಮಿಕ್ಕಿ ಶಿಕ್ಷಕರಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬ ಎನ್ನುವುದೇ ನನಿಗೆ ಹೇಮ್ಮೆಯ ವಿಚಾರ.ಇದೆ ಹಿಂದುತ್ವದ ಶಕ್ತಿಕೇಂದ್ರ, ಅದರ ಪ್ರಯೋಗ ಶಾಲೆಯೇ ಶ್ರೀರಾಮ ವಿದ್ಯಾಕೇಂದ್ರ.
ಜೀವನದಲ್ಲಿ ಒಮ್ಮೆಯಾದ್ರು ಶ್ರೀರಾಮ ವಿದ್ಯಾಕೇಂದ್ರವನ್ನು,ಅಲ್ಲಿ ನಡೆಯುವ ಸರಸ್ವತಿ ವಂದನೆಯನ್ನು,
ಕ್ರೀಡೋತ್ಸವವನ್ನು,ಅಲ್ಲಿನ ಚಟುವಟಿಕೆಗಳನ್ನು ನೋಡಲೇಬೇಕು ಇಲ್ಲ ಅಂದ್ರೆ ಜೀವನ ಪರಿಪೂರ್ಣ ಆಗಲ್ಲ..ನೋಡದ ಜೀವನಕ್ಕೆ ಅರ್ಥವಿಲ್ಲ.ನಾನು ಬರವಣಿಗೆಯಲ್ಲಿ ಎಷ್ಟು ವಿವರಿಸಿದ್ರು ಅಷ್ಟೇ. ನೀವು ಬಿಡುವು ಮಾಡಿಕೊಂಡು ಬಂದು ಒಮ್ಮೆ ನೋಡಿ ...ಒಮ್ಮೆ ಭೇಟಿ ಕೊಡಿ..
ಇಂತಹ ದೇವಸ್ಥಾನದ ದೇವರಂತಹ ಮಕ್ಕಳ, ಕರ್ನಾಟಕದ ಅತ್ಯಂತ ದೊಡ್ಡ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಊಟವನ್ನು ಸಿದ್ದರಾಮಯ್ಯ ಸರ್ಕಾರ ಕಸಿದು ಕೊಂಡದ್ದು ಎಷ್ಟು ಸರಿ ನೀವೇ ಯೋಚಿಸಿ? ಅದ್ರಲ್ಲೂ 94 ಶೇಕಡಾ ವಿದ್ಯಾರ್ಥಿಗಳು ಸಿದ್ದರಾಮಯ್ಯ ರಿಗೆ ಪ್ರೀಯವಾದ ಅಹಿಂದ ವರ್ಗದವರು...
ಮೊನ್ನೆ ಮಕ್ಕಳು ಪ್ರತಿಭಟನೆಯಲ್ಲಿ ತಮ್ಮ ಹಸಿವನ್ನು,ತಮಗಾದ
ಅನ್ಯಾಯವನ್ನು ಹೇಳಿಕೊಂಡಾಗ ನನಗೂ ಕಣ್ಣೀರು ಬಂತು.. ನಾನು ಕಂಡಂತೆ ಇದು ಇತರ ಶಾಲಾ ಕಾಲೇಜಿನಂತಲ್ಲ ಒಂದು ಅದ್ಭುತ ಸಂಸ್ಥೆ ಇದು.!!
ಧನ್ಯವಾದಗಳು.
-ಸಚಿನ್ ಜೈನ್ ಹಳೆಯೂರು
No comments