Breaking News

ಭಾರತಕ್ಕೆ ಕೀರ್ತಿ ತಂದ ಕುಬ್ಜರುನವದೆಹಲಿ : ಟೊರೊಂಟೊದಲ್ಲಿ ನಡೆದ ವಿಶ್ವ ಕುಬ್ಜರ ಪಂದ್ಯಾವಳಿಯಲ್ಲಿ ಭಾರತೀಯ ತಂಡವು ಒಟ್ಟು 37 ಪದಕಗಳನ್ನು ಪಡೆಯುವ ಮೂಲಕ ಭಾರತದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ.

ಮೊದಲಿಗೆ ಭಾರತದ ತಂಡದ ಆಟಗಾರರನ್ನು ಅಗ್ರ ಸ್ಥಾನದಲ್ಲಿ ಕಾಣಲು ಅವಣಿಸುತ್ತಿದ್ದ ಕ್ರೀಡಾ ಪ್ರೇಮಿಗಳಿಗೆ ಅಂಕಪಟ್ಟಿಯಲ್ಲಿ ಟಾಪ್-10 ಸ್ಥಾನ ಪಡೆಯುವ ಮೂಲಕ ವಿಶ್ವವನ್ನು ದಿಗ್ಭ್ರಮೆಗೊಳಿಸುವಂತೆ ಮಾಡಿದೆ.

ಪಂದ್ಯಾವಳಿಯಲ್ಲಿ ಒಟ್ಟು 15 ಚಿನ್ನ, 10 ಬೆಳ್ಳಿ ಮತ್ತು 12 ಕಂಚು ಒಟ್ಟು 37 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಕೆನಡಾದಲ್ಲಿ ಭಾರತದ ತಿರಂಗ ಧ್ವಜವನ್ನು ಹಾರಿಸಿದ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ವಿಜಯ್ ಗೋಯೆಲ್ ಸೇರಿದಂತೆ ಸಹಸ್ರಾರು ಕ್ರೀಡಾಭಿಮಾನಿಗಳು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಒಂದು ವಾರಗಳ ಕಾಲ ನಡೆದ ಒಂಟಾರಿಯೊ ಪ್ರಾಂತ್ಯದ ಗುಲ್ಫ್ ವಿಶ್ವವಿದ್ಯಾನಿಲಯದಲ್ಲಿ 24 ವಿವಿಧ ದೇಶಗಳ 400ಕ್ಕೂ ಹೆಚ್ಚು ಕ್ರೀಡಾಪುಟಗಳು ಭಾಗವಹಿಸಿದ್ದರು.

ಭಾರತದ ಕ್ರೀಡಾಪಟು ಜಾಬಿ ಮ್ಯಾಥ್ಯೂ ಅವರು ಒಟ್ಟು 2 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದ ಕ್ರೀಡಾ ಸಾಧನೆ ಮೆರೆದರು.

No comments