ಎಲ್ಲಾ ಅಂದು ಕೊಂಡಂತೆ ನಡೆದರೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ದಾಖಲೆಯ ಇಳಿಕೆ !
ನವದೆಹಲಿ : ನೋಟ್ ಬ್ಯಾನ್ ನಿಂದ ಬಾರಿ ತೊಂದರೆಗೆ ಒಳಗಾಗಿದ್ದ ದೇಶದ ಜನತೆಗೆ ಮೋದಿ ಸರಕಾರ್ ಬಂಪರ್ ಆಫರ್ ನೀಡಲು ಮುಂದಾಗಿದೆ . ಒನ್ ನೇಶನ್ ಒನ್ ಟ್ಯಾಕ್ಸ್ (ಜಿಎಸ್,ಟಿ) ಜಾರಿಗೆ ತಂದು, ಟ್ಯಾಕ್ಸ್ ಕಟ್ಟದೆ ದೇಶದ ಆರ್ಥಿಕ ವ್ಯವಸ್ಥೆಗೆ ದ್ರೋಹ ಬಗ್ಗೆಯುತ್ತಿದ್ದವರಿಗೆ ಚಾಟಿ ಬೀಸಿತ್ತು ಮೋದಿ ಸರ್ಕಾರ.
ಅಧಿಕಾರಕ್ಕೆ ಬರುವ ಮೊದಲು ಅಚ್ಚೆ ದಿನ್ ಆಯೇಗ ಅಂತ ಮತ ಪಡೆದ ಮೋದಿ ಜಿ ಅಚ್ಚೇ ದಿನ್ ಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ವಿಪಕ್ಷಗಳು ಹೊದ ಕಡೆಗಳಲ್ಲಿ ಮೋದಿ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಆದರೆ ಇದುವರೆಗೂ ವಿರೋಧ ಪಕ್ಷಗಳ ಮಾತಿಗೆ ಪ್ರತಿಕ್ರಿಯೆ ನೀಡದ ಪ್ರಧಾನಿ ಮೋದಿ ತನ್ನ ಅಭಿವೃದ್ಧಿಯ ವೇಗದ ಮುಖೇನ ಉತ್ತರ ನೀಡುತ್ತಿರುವುದು ಕಾಂಗ್ರೆಸ್ ಸೇರಿ ಎಲ್ಲಾ ವಿರೋಧ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಿದೇಶಗಳಲ್ಲಿ ಭಾರತೀಯ ಪ್ರಧಾನಿ ಮೋದಿ ಗೆ ಜಗತ್ತಿನ ನಾಯಕ ಅನ್ನುವ ಬಿರುದುಗಳು ಸಿಕ್ಕಿದ್ದು, ಆದರೆ ಅದೆಲ್ಲದರ ಶ್ರೇಯಸ್ಸು ಎಲ್ಲಾ ಭಾರತೀಯರಿಗೆ ಸೇರಬೇಕು ಎಂದಿದ್ದಾರೆ. 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಘೋಷಣೆ ಅಡಿಯಲ್ಲಿ ಸರಕಾರ ನಡೆಸುತ್ತಿರುವ ಮೋದಿ ಟೀಂ ಈಗ ಭಾರತದ ಜನತೆಗೆ ಬಾರಿ ಕೊಡುಗೆ ನೀಡಲು ಮುಂದಾಗಿದೆ .
ಪೆಟ್ರೋಲಿಯಂ ಕ್ಷೇತ್ರದಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಮೋದಿ ಸರ್ಕಾರ ತೀರ್ಮಾನಿಸಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಬಾರಿ ಇಳಿಕೆ ಕಂಡ ಪರಿಣಾಮ ಅದರ ಲಾಭವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ . ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ಪ್ರತಿ ರಾಜ್ಯಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹಾಕುತ್ತಿರುವ ತೆರಿಗೆ ತೆರವುಗೊಳಿಸಿ ನೇರವಾಗಿ ಕೆಂದ್ರ ಸರಕಾರದ ಒಂದು ತೆರಿಗೆ ಮಾತ್ರ ಅನ್ವಯ ಆಗುವಂತೆ ಮಾಡಿ, ರಾಜ್ಯ ಸರಕಾರಕ್ಕೆ ಆಗುವ ನಷ್ಟವನ್ನು ಕೆಂದ್ರ ಸರಕಾರ ಭರಿಸಿಕೊಡುವ ಮುಖೇನಾ ಜನಸಾಮಾನ್ಯರಿಗೆ ಪೆಟ್ರೋಲ್ ಡೀಸೆಲ್ ಅಗ್ಗಕ್ಕೆ ಸಿಗುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಇದೆಲ್ಲಾ ಅಂದು ಕೊಂಡಂತೆ ನಡೆದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕನಿಷ್ಠ ಅಂದರೆ ಹತ್ತು ರೂಪಾಯಿಗಳ ಇಳಿಕೆ ಆಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ .
ಏನೇ ಆಗಲಿ ಆದಷ್ಟು ಬೇಗ ಈ ಯೋಜನೆ ಕಾರ್ಯರೂಪಕ್ಕೆ ಬರಲಿ ಎಂಬುವುದು ಕೋಟ್ಯಾಂತರ ಭಾರತೀಯರ ಆಶಯವಾಗಿದೆ.
No comments