ಕಾಂಗ್ರೆಸ್ ಗೆ ಬಿಗ್ ಶಾಕ್ ಹಿಂದು ವಿರೋಧಿ ನೀತಿಗೆ ಬೇಸತ್ತು ಪಕ್ಷ ತೊರೆದ ರಾಹುಲ್ ಆಪ್ತ
ನವದೆಹಲಿ: ರಾಷ್ಟ್ರಾದ್ಯಂತ ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋಗಿ ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್ಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತ ಮತ್ತು ಕಾಂಗ್ರೆಸ್ ಪಕ್ಷದ ಚುನಾಣಾ ತಂತ್ರಗಾರ ಆಶಿಶ್ ಕುಲಕರ್ಣಿ ರಾಜಿನಾಮೆ ನೀಡಿದ್ದಾರೆ.
ಕಾಂಗ್ರೆಸ್ ಎಡಪಂಥೀಯ ಸಿದ್ದಾಂತಕ್ಕೆ ಮಣಿ ಹಾಕುತ್ತಿದೆ. ಜತೆಗೆ ಎಡಪಂಥೀಯ ಸಿದ್ದಾಂತ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿಗಳ ಕುರಿತು ಮೃದು ಧೋರಣೆ ತೋರುತ್ತಿದೆ. ಕಾಶ್ಮೀರ ಮತ್ತು ಜೆಎನ್ಯು ವಿಷಯದಲ್ಲಿ ತನ್ನದೇ ಆದ ನಿಲುವನ್ನು ತಳೆಯುವಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ ಎಂದು ಆಶಿಶ್ ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ನ ಎಡಪಂಥಿಯ ನಿಲುವೇ ಪಕ್ಷಕ್ಕೆ ಮಾರಕವಾಗ್ತಿದೆ. ಇದರಿಂದಾಗಿಯೇ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ, ಅಸ್ಸಾಂ, ಗೋವಾ, ಉತ್ತರಾಖಂಡ, ಅರುಣಾಚಲ ಪ್ರದೇಶದಲ್ಲಿ ಸೋಲನುಭವಿಸಿದೆ. ಕಾಂಗ್ರೆಸ್ ಪಕ್ಷ ದೇಶದ ತಳಮಟ್ಟದ ಸಮಸ್ಯೆಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದೆ, ಜತೆಗೆ ಬದಲಾಗುತ್ತಿರುವ ಸಮಯದೊಂದಿಗೆ ಹೊಂದಿಕೊಳ್ಳುವಲ್ಲಿ ಸೋಲನುಭವಿಸಿದೆ.
ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ರೂಪದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಕಳೆದುಹೋಗುತ್ತಿದ್ದು, ಹಣ ಬಲ ಇರುವವರಿಗೆ ಮಾತ್ರ ಪಕ್ಷದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಆಶಿಶ್ ಕಾಂಗ್ರೆಸ್ ಪಕ್ಷದ ಹುಳುಕುಗಳ ಕುರಿತು ತಮ್ಮ ರಾಜಿನಾಮೆ ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.
(ವಿಜಯವಾಣಿ)
No comments