Breaking News

ಕಾವ್ಯ ಶ್ರೀ ಅನುಮಾನಾಸ್ಪದ ಸಾವು ಪ್ರಕರಣ ಪ್ರತಿಭಟನೆಗೆ ಕೈ ಕೊಟ್ಟ ಸಂಘ ಪರಿವಾರದ ನಾಯಕರುಗಳು



ಮಂಗಳೂರು : ಜುಲೈ 20ರಂದು ನಿಗೂಢ ಸಾವನ್ನಪ್ಪಿದ ಆಳ್ವಾಸ್ ವಿದ್ಯಾಸಂಸ್ಥೆಯ ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಕುಮಾರಿ ಕಾವ್ಯ ಆತ್ಮಹತ್ಯೆ ಇಡೀ ರಾಜ್ಯದಾದ್ಯಂತ ಬಾರಿ ಸದ್ದು ಮಾಡಿತ್ತು .
ಮೇಲ್ನೊಟಕ್ಕೆ ಇದು ಕೊಲೆ ಎಂದು ಕಂಡು ಬರುವ ರೀತಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವರ್ತನೆಗಳು ಜನರಲ್ಲಿ ಅನುಮಾನವನ್ನು ಹುಟ್ಟು ಹಾಕಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಹುಟುಹಾಕಿತ್ತು ಇದಕ್ಕೆ ಕಾವ್ಯ ಹೆತ್ತವರ ಆರೋಪ ಕೂಡ ಪುಷ್ಟಿ ನೀಡಿತ್ತು ಈ ಸಂಬಂಧ ಕಾವ್ಯಳ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಇಡೀ ರಾಜ್ಯದ ಜನ ಬಿದಿಗೆ ಇಳಿದು ಜಾತಿ,ಮತ,ಪಕ್ಷದ ಬೇದ ಮರೆತು ಹೋರಾಟ ನಡೆಸುತ್ತಿದ್ದಾರೆ ಆದರೆ ಇದೀಗ ಹೋರಾಟ ರಾಜಕೀಯ ಬಣ್ಣ ಪಡೆದುಕೊಂಡಿದ್ದು ಕಾವ್ಯಳ ಸಾವಿಗೆ ನ್ಯಾಯ ಒದಗಿಸುವ ಬದಲು ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಕೆಲವೊಂದು ಸಂಘಟನೆಯ ನಾಯಕರು ಕಾವ್ಯಳ ಸಾವಿಗೆ ನ್ಯಾಯ ಓದಗಿಸುವ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಾ ಇರುವ ಅಂಶ ಇದೀಗ ಬಯಲಾಗಿದೆ .


ಇದಕ್ಕೆ ಪುಷ್ಟಿ ನೀಡುವಂತೆ ಆಗಸ್ಟ್18ರಂದು ಬಜ್ಪೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಾವ್ಯಳ ಸಾವಿಗೆ ನ್ಯಾಯ ಸಿಗುವಂತೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಸಂಘ ಪರಿವಾರದ ಪ್ರಮುಖ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಮಂಗಳೂರು ಸಂಸದರ ಆಪ್ತರಾದ ಈಶ್ವರ್ ಕಟೀಲ್ , ಅದೇ ರೀತಿ ಸಂಘಟನೆಯ ಪ್ರಮುಖರು ತಡ ರಾತ್ರಿ ಭಜರಂಗದಳದ ಕಾರ್ಯಕರ್ತರಿಗೆ ಕರೆ ಮಾಡಿ ಪ್ರತಿಭಟನೆ ಮಾಡಬಾರದು ಅದು ನಡೆದರೂ ಅದರಲ್ಲಿ ಭಾಗವಹಿಸಬಾರದು ಎಂದು ಹೇಳಿರುವ ಆಡಿಯೋ ತುಣುಕು ವಾಟ್ಸಪ್ ನಲ್ಲಿ ವೈರಲ್ ಆಗಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ . ಇದೇ ರೀತಿಯ ಸಾವು ನಿಮ್ಮ ಮನೆಯಲ್ಲಿ ನಡೆದಿದ್ದರೆ ಪ್ರತಿಭಟನೆಯನ್ನು ಹೀಗೆ ಹತ್ತಿಕ್ಕುತ್ತಿದ್ದೀರಾ ಅಂತ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಬಲಪಂಥೀಯ ಪೇಸ್ಬುಕ್ ಪುಟವಾದ ವೀರ ಕೇಸರಿ ಪುಟದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಅಲ್ಲಿ ಕೂಡ ಸಂಘಪರಿವಾರದ ಈ ವರ್ತನೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ. 

No comments