Breaking News

Rss ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣ ಏಳು ಮಂದಿ ಪಿಎಪ್ ಐ ಗೂಂಡಾಗಳ ಬಂಧನ


ಸುದ್ದಿ24×7 ವರದಿ-(19.08.17): ಬಂಟ್ವಾಳ ತಾಲ್ಲೂಕಿನ ಬಿಸಿರೋಡ್ ನಲ್ಲಿ ಕೊಲೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಪೊಲೀಸರು 7 ಮಂದಿ ಪಿಎಪ್ ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮೊದಲು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜ ನಗರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡ ಖಲೀಲುಲ್ಲಾ ಮತ್ತು ಸಜಿಪ ಮುನ್ನೂರು ಹಾಲಾಡಿ ನಿವಾಸಿ ಕಲಂದರ್ ಶಾಫಿ ಹಾಗೂ ಇನ್ನೂ ಮೂವರನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಪಿಎಪ್ ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಮೂಲಕ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಕೊಮುಗಲಭೆ ನಡೆಸಲು ಹೊಂಚು ಹಾಕಿದ ಪಿಎಪ್ ಐ ಎಂಬ ರಕ್ತ ಪಿಪಾಸುಗಳ ಬಣ್ಣ ಬಯಲಾಗಿದೆ .
ವಿಪರ್ಯಾಸವೆಂದರೆ ಇದೇ ರಾಜ್ಯ ಸರ್ಕಾರ ಇಂತಹ ಉಗ್ರ ಸಂಘಟನೆಯ ಮೇಲೆ ಇದ್ದ 150 ಪ್ರಕರಣಗಳನ್ನು ಹಿಂದಕ್ಕೆ ಪಡೆದು ಆರೋಪಿಗಳಿಗೆ ಬಿಡುಗಡೆ ಬಾಗ್ಯ ದೊರಕ್ಕಿಸಿದ್ದರು ಈಗ ಅದೇ ಸಂಘಟನೆ ಅಮಾಯಕರ ರಕ್ತ ಚೆಲ್ಲುತ್ತಾ ಇದ್ದು ಇಡೀ ರಾಜ್ಯಕ್ಕೆ ತಲೆ ನೋವಿನ ಸಂಗತಿಯಾಗಿದೆ.

ಇಂದು ಬಂದಿಸಲಾದ ವ್ಯಕ್ತಿಗಳು ಸಕಲೇಶಪುರದ ಸುಹೈಲ್ ಹಾಗೂ ಸಾದಿಕ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೊಲೆಯ ಪ್ರಮುಖ ಆರೋಪಿಗಳಾಗಿದ್ದು  ಹಾಗೂ ಸಾಕ್ಷ್ಯನಾಶಕ್ಕೆ ಸಂಬಂಧಪಟ್ಟ ಆರೋಪಿಗಳಾಗಿದ್ದು ಹತ್ಯೆಯ ಮಾಸ್ಟರ್ ಮೈಂಡ್   ಇನ್ನೂ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

No comments