ಉತ್ತರ ಪ್ರದೇಶದಲ್ಲಿ ಶಂಕಿತ ಬಾಂಗ್ಲಾದೇಶದ ಉಗ್ರನ ಸೆರೆ
ಉತ್ತರಪ್ರದೇಶ : ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಭಯೋತ್ಪಾದಕ ವಿರೋಧಿ ಪಡೆ ಇಂದು ಮುಜಾಫರ್ ನಗರದ ಕುಟೆಸರಾ ಗ್ರಾಮದಲ್ಲಿ ಬಾಂಗ್ಲಾದೇಶದ ವ್ಯಕ್ತಿಯನ್ನು ಬಂಧಿಸಿದೆ.ಶಂಕಿತನನ್ನು ಅಬ್ದುಲ್ಲಾ ಎಂದು ಗುರುತಿಸಲಾಗಿದೆ.
ಅಬ್ದುಲ್ಲಾ ಒಂದು ತಿಂಗಳಿಂದ ಮುಜಫರ್‌ನಗರದ ಚರ್ತವಾಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಇದಕ್ಕೂ ಮುನ್ನಾ ಈತ 2011ರಿಂದ ಸಹರಾನ್‌ಪುರದಲ್ಲಿ ವಾಸವಿದ್ದ. ನಕಲಿ ದಾಖಲೆಗಳನ್ನು ನೀಡಿ ಈತ ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನೂ ಮಾಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ಲಾ ಬಂಧನದ ಬಳಿಕ ಭಾರತದಲ್ಲಿ ಎಬಿಟಿ ನಂಟಿರುವ ಜಾಲಗಳ ಪತ್ತೆಕಾರ್ಯ ಮುಂದುವರಿದಿದೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
loading...
No comments