Breaking News

ಸದಾನಂದ ಗೌಡ , ಶೋಭಾ ಮೇಲೂ ಐಟಿ ದಾಳಿ ಆಗಲಿ : ಯು ಬಿ ವೆಂಟಕೇಶ್


ಮಂಗಳೂರು : ಇಂಧನ ಸಚಿವ ಡೀಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ಐಟಿ ದಾಳಿ ನಡೆಸಲಾಗಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಆಸ್ತಿ ಗುಡ್ಡೆ ಹಾಕಿಕೊಂಡಿರುವ ಕೇಂದ್ರ ಮಂತ್ರಿ ಡೀವಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮೇಲೂ ಐಟಿ ದಾಳಿ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು ಬಿ ವೆಂಟಕೇಶ್ ಒತ್ತಾಯಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಬಿಜೆಪಿ ನಾಯಕರಷ್ಟು ಭ್ರಷ್ಟರು ಇನ್ಯಾರೂ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆ, ಸದಾನಂದ ಗೌಡ ಅವರ ಸಂಪೂರ್ಣ ಬಯೋಡಾಟ ತೆಗೆದುಕೊಳ್ಳಿ. ಅವರು ಹುಟ್ಟುವಾಗ ಎಷ್ಟು ಆಸ್ತಿ ಇತ್ತು. ಈಗ ಎಷ್ಟಿದೆ..? ಈ ಆಸ್ತಿ ಎಲ್ಲಿಂದ ಮಾಡಿದ್ದಾರೆ..? ಹೇಗೆ ಮಾಡಿದ್ದಾರೆ ಎನ್ನುವ ಎಲ್ಲಾ ವಿಚಾರಗಳೂ ಹೊರಗೆ ಬರಲಿ. ಅವರ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಬೇಕು” ಎಂದು ಆಗ್ರಹಿಸಿದ್ದಾರೆ

No comments