Breaking News

ಇಂದಿರಾ ಕ್ಯಾಂಟೀನ್‌ಗೆ ಕೆಟ್ಟ ಹೆಸರು ತರಲು ಆಹಾರದಲ್ಲಿ ಏನನ್ನಾದರು ಮಿಶ್ರಣ ಮಾಡುವ ನೀಚತನಕ್ಕೆ ಬಿಜೆಪಿ ಇಳಿಯು ಬಹುದು : ದಿನೇಶ್ ಗುಂಡೂರಾವ್



ಬೆಂಗಳೂರು : ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನಿನ ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರು ಆಹಾರದಲ್ಲಿ ಏನಾದರು ಮಿಶ್ರಣ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಬಹುದು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದಿರಬೇಕು ಎಂದು ಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಪ್ರದೇಶ ಕಾಂಗ್ರೆಸ್ ಹಾಗೂ ಇತರೆ ಹಿಂದುಳಿದ ವರ್ಗಗಳ ವಿಭಾಗ ಆಯೋಜಿಸಿದ್ದ ದಿ. ರಾಜೀವ್‌ಗಾಂಧಿ ಹಾಗೂ ದಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಯನ್ನು ಬಿಜೆಪಿಯವರು ಜಾರಿ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಇಂದಿರಾ ಕ್ಯಾಂಟೀನ್ ಯೋಜನೆ ಜನಪ್ರಿಯವಾಗಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೆಟ್ಟ ಹೆಸರು ತರಲು ಯಾವುದೇ ನೀಚತನಕ್ಕೂ ಇಳಿಯುವ ಜನ ಬಿಜೆಪಿಯವರು ಎಂದು ಟೀಕಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಕೆಟ್ಟ ಹೆಸರು ತರಲು ಆಹಾರದಲ್ಲಿ ಏನನ್ನಾದರು ಮಿಶ್ರಣ ಮಾಡುವ ನೀಚತನಕ್ಕೆ ಬಿಜೆಪಿ ಇಳಿಯುವ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ. ಹಾಗಾಗಿ, ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು

ಸಮಾರಂಭದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಂಸದರಾದ ಕೆ.ಹೆಚ್ ಮುನಿಯಪ್ಪ, ಕೆ.ಸಿ ರಾಮಮೂರ್ತಿ, ಮೇಯರ್ ಪದ್ಮಾವತಿ, ಕಾಂಗ್ರೆಸ್‌ನ ಇತರೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಸಿ ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.





loading...

No comments