Breaking News

ಬಿಜೆಪಿ ಸರ್ಕಾರ ಬಡ‌ವರ ವಿರೋಧಿ : ಖರ್ಗೆ



ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಕಾರ್ಯಕ್ರಮಗಳು ಹಾಗೂ ಮೀಸಲಾತಿ ವಿರೋಧಿಯಾಗಿದೆ ಎಂದು ಟೀಕಿಸಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆದಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ಸರ್ವಾಧಿಕಾರಿ ವ್ಯವಸ್ಥೆ ಜಾರಿಯಾಗುತ್ತದೆ ಎಂದರು.

ಪ್ರದೇಶ ಕಾಂಗ್ರೆಸ್ ಹಾಗೂ ಇತರೆ ಹಿಂದುಳಿದ ವರ್ಗಗಳ ವಿಭಾಗ ಪುರಭವನದಲ್ಲಿ ಆಯೋಜಿಸಿದ್ದ ದಿ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿತುಂಬಿ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.

ಮೀಸಲಾತಿಗೆ ವಿರೋಧವಾಗಿರುವ ಬಿಜೆಪಿ, ಸಂವಿಧಾನವನ್ನೇ ಬದಲಾಯಿಸಲು ಹೊರಟಿದೆ. ಇವರಿಂದ ಬಡವರ ಪರ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ದೇಶವನ್ನು ಅವನತಿಯ ಹಂಚಿಗೆ ಬಿಜೆಪಿ ಕೊಂಡೊಯ್ಯುತ್ತಿದೆ. ಇವರಿಗೆ ಸಂವಿಧಾನ ಬೇಕಿಲ್ಲ. ಆರ್‌ಎಸ್‌ಎಸ್‌ನ ಆದೇಶದಂತೆ ಸನಾತನ ಧರ್ಮವನ್ನು ದೇಶದಲ್ಲಿ ಪ್ರತಿಷ್ಠಾಪಿಸಬೇಕಿದೆ ಅಷ್ಟೇ ಎಂದರು.

ಬಡವರ ಕಾರ್ಯಕ್ರಮಗಳನ್ನು ಟೀಕೆ ಮಾಡುವುದಷ್ಟೇ ಬಿಜೆಪಿಗೆ ಗೊತ್ತು. ಇಂದಿರಾ ಕ್ಯಾಂಟೀನ್‌ಗಳನ್ನು ಉದ್ಯಾನವನದಲ್ಲಿ ಮಾಡಿದರೆ ಅದನ್ನು ವಿವಾದ ಮಾಡುತ್ತಾರೆ. ಇದೇ ಉದ್ಯಾನವನದಲ್ಲಿ ಕ್ಲಬ್‌ಗಳು ನಡೆಯುತ್ತಿವೆ. ಈ ಬಗ್ಗೆ ಬಿಜೆಪಿ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.




loading...

No comments