ಮುಂಬರುವ ಚುನಾವಣೆಯಲ್ಲಿ ನೀವು ಯಾರ ಪರ
ಬೆಂಗಳೂರು: 2013ರಲ್ಲಿ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ ಸರ್ಕಾರ ಐದನೇ ವರ್ಷಕ್ಕೆ ಕಾಲಿಟ್ಟಿದೆ ಚುನಾವಣಾ ರಣಕಹಳೆಗೆ ಇನ್ನೂ ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಮೂರೂ ಪ್ರಮುಖ ಪಕ್ಷಗಳು ಈಗಾಗಲೇ ಪೂರ್ವಭಾವಿ ತಯಾರಿಯಲ್ಲಿ ತೊಡಗಿವೆ.ಈ ಮೂರೂ ಪಕ್ಷಗಳಿಗೆ ಸಡ್ಡು ಬಡಿಯಲು ಕನ್ನಡ ಚಿತ್ರ ರಂಗದ ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಕಟ್ಟಿ ರಾಜಕೀಯಕ್ಕೆ ದುಮುಕಿದ್ದಾರೆ.
ರಾಜ್ಯ ರಾಜಕಾರಣದ ವಾಸ್ತವ ಚಿತ್ರಣ ಈ ರೀತಿ ಇರಬೇಕಾದರೆ, ಮತದಾರರು ತಮ್ಮ ತಮ್ಮಲ್ಲೇ ಚುನಾವಣಾ ಲೆಕ್ಕಾಚಾರ ಹಾಕ್ತಿದ್ದಾರೆ. ಎಲೆಕ್ಷನ್ ವಾರ್ ಗೆ ಇನ್ನೂ ಕೆಲವೇ ತಿಂಗಳು ಇರುವಾಗಲೇ ಯಾರು ಗೆಲ್ತಾರೆ ಯಾರು ಸೋಲ್ತಾರೆ ಎಂಬ ಮತ ಗಣಿತ ಈಗಾಗಲೇ ರಾಜ್ಯದಲ್ಲಿ ಪ್ರಚಲಿತದಲ್ಲಿದೆ. ಈ ಕದನ ಕುತೂಹಲಕ್ಕೆ ತೆರೆ ಎಳೆಯಲು ಹಾಗೂ ಮತದಾರ ಪ್ರಭುಗಳ ಮನದಾಳ ಅರಿಯಲು suddi24x7 ಅಂತರ್ಜಾಲ ವಾಹಿನಿ ನಡೆಸುತ್ತಿರುವ ಸಮೀಕ್ಷೆ .ಮುಂಬರುವ ಚುನಾವಣೆಯಲ್ಲಿ ನೀವು ಯಾರ ಪರ ನಿಲ್ಲಲ್ಲಿದ್ದೀರಾ ನಿಮ್ಮ ಅಭಿಪ್ರಾಯ ತಿಳಿಸಿ ಮುಂಬರುವ ಶನಿವಾರದಂದು ಸಮೀಕ್ಷೆಯ ಫಲಿತಾಂಶವನ್ನು ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು .
loading...
No comments