ವಿಜಯಪುರ ಮಹಾನಗರ ಪಾಲಿಕೆ ಕೈ ವಶ:ಮುಖಭಂಗ ಅನುಭವಿಸಿದ ಯತ್ನಾಳ್
ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್‍ನ ಮೆಹಜಬೀನ್ ಹೊರ್ತಿ ಹಾಗೂ ಉಪ ಮೇಯರ್ ಆಗಿ ದಿನೇಶ ಹಳ್ಳಿ ಚುನಾಯಿತರಾಗಿದ್ದಾರೆ.ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್-10, ಪಕ್ಷೇತರ-5, ಎಐಎಂಐಎಂ-2, ಜೆಡಿಎಸ್-1 ಪಕ್ಷಗಳ ಬಲಾಬಲ ಇತ್ತು.
ಬಿಜೆಪಿಯಿಂದ ಆಯ್ಕೆಯಾಗಿದ್ದ 17 ಸ್ಥಾನಗಳಲ್ಲಿ ಒಬ್ಬ ಸದಸ್ಯ ಅನಾರೋಗ್ಯದಿಂದ ಸಾವಿಗೀಡಾಗಿದ್ದ. ಹೀಗಾಗಿ ಬಿಜೆಪಿ ಸದಸ್ಯ ಬಲ 16ಕ್ಕೆ ಕುಸಿದಿತ್ತು. ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಒಬ್ಬ ಜೆಡಿಎಸ್ ಸದಸ್ಯ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಲ್ಲದೆ ಕಾಂಗ್ರೆಸ್‍ನ ಇಬ್ಬರು ಶಾಸಕರು, ಇಬ್ಬರು ಎಂಎಲ್ ಸಿ ಮತ ಚಲಾವಣೆಯಿಂದ ಕಾಂಗ್ರೆಸ್ 22 ಸದಸ್ಯರ ಬಲದ ಪರಿಣಾಮ ಕಾಂಗ್ರೆಸ್‍ನ ಮೆಹಜಬೀನ್ ಹೊರ್ತಿ ಮೇಯರ್, ದಿನೇಶ ಹಳ್ಳಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.ಹೆಚ್ಚು ಬಹುಮತ ಹೊಂದಿದ್ದ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಇದರಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮುಖಭಂಗವಾದಂತಾಗಿದೆ.
No comments